Murder in Ramanagar: ದುಡ್ಡು ಕೊಡ್ತೀನಿ ಅಂತ ಕರೆಸಿಕೊಂಡು ಕೊಲೆ..! ಮಗಳು ಉಸಿರುಗಟ್ಟಿಸಿದ್ರೆ..ಅಳಿಯ ಗುಂಡಿ ತೋಡಿದ..!


20 ಸಾವಿರಕ್ಕಾಗಿ ಚಿಕ್ಕಮ್ಮನನ್ನೇ ಮುಗಿಸಿಬಿಟ್ಟ ಮಗಳು..!
2 ತಿಂಗಳಿನಲ್ಲಿ ಹಣ ವಾಪಸ್ ಮಾಡ್ತೀನಿ ಅಂದಿದ್ರು..!
15 ದಿನಗಳ ಹಿಂದೆಯೇ ಕೊಲ್ಲಲು ಪ್ಲಾನ್ ಮಾಡಿದ್ರು..!

First Published Jun 29, 2024, 4:32 PM IST | Last Updated Jun 29, 2024, 4:32 PM IST

ಆಕೆ 70 ವರ್ಷದ ವೃದ್ಧೆ. ಮಕ್ಕಳು ಬೆಂಗಳೂರಿನಲ್ಲಿದ್ರೆ ಈಕೆ ಗಂಡನ ಜೊತೆ ಗ್ರಾಮದಲ್ಲೇ ಜೀವನ ಮಾಡ್ತಿದ್ದಳು. ಆವತ್ತು ಯಾರೋ ಹಣ (Money) ಕೊಡ್ತಾರೆ ಹೋಗಿ ಬರ್ತೀನಿ ಅಂತ ಗಂಡನಿಗೆ ಹೇಳಿ ಹೋದವಳು ವಾಪಸ್ ಬರಲೇ ಇಲ್ಲ. ರಾತ್ರಿಯಾದರೂ ಅಮ್ಮ ಪತ್ತೆಯಾಗದ್ರಿಂದ ಮಕ್ಕಳೂ ಸಹ ಬೆಂಗಳೂರಿನಿಂದ ವಾಪಸ್ ಆಗಿ ಹುಡುಕಬಾರದ ಕಡೆಯಲೆಲ್ಲಾ ಹುಡುಕಾಡಿದ್ರು. ಆದ್ರೆ ಮರು ದಿನ ಆ ತಾಯಿ (Old woman)ಹೆಣವಾಗಿ ಸಿಕ್ಕಿದ್ದಳು. ಯಾರೋ ಆಕೆಯನ್ನ ಕೊಂದು ಮಣ್ಣಲ್ಲಿ ಊತು ಹಾಕಿದ್ರು. ದುಡ್ಡು ಇಸ್ಕೊಂಡು ಬರ್ತೀನಿ ಅಂತ ಹೋದವಳು ಹೆಣವಾಗಿದ್ದಳು. ಆಕೆಯ ಶವ ರವಿಯ ತೋಟದಲ್ಲಿ ಪತ್ತೆಯಾಗಿತ್ತು. ಸೋ ಅವನೇ ಕೊಲೆಗಾರ (Murder) ಅನ್ನೋದು ಗೊತ್ತಾಗಿತ್ತು. ಆದ್ರೆ ಅವನನ್ನ ಬಂಧಿಸೋಣ ಅಂದ್ರೆ ಅವನು ಅಷ್ಟೊತ್ತಿಗಾಗಲೇ ಎಸ್ಕೇಪ್. 6 ತಿಂಗಳ ಹಿಂದೆ ಕಷ್ಟ ಅಂತ ಬಂದಾಗ ಮಗಳು ಅಳಿಯ ಅಂತ ಸುನಂದಮ್ಮ ಹಿಂದೆ ಮುಂದೆ ನೋಡದೇ 20 ಸಾವಿರ ಹಣ ಕೊಟ್ಟಿದ್ದಳು. ಎರಡು ತಿಂಗಳಲ್ಲಿ ಕೊಡ್ತೀನಿ ಅಂದವರು 6 ತಿಂಗಳಾದ್ರೂ ಕೊಟ್ಟಿರಲಿಲ್ಲ. ಕೊನೆಗೆ ಸುನಂದಮ್ಮ ದುಡ್ಡು ಬೇಕೇ ಬೇಕು ಅಂತ ಪಟ್ಟು ಹಿಡಿದಾಗ ಆ ದಂಪತಿ ಮಾಡಿದ್ದು ಸುನಂದಮ್ಮನನ್ನೇ ಮುಗಿಸುವ ಯೋಚನೆಯನ್ನ. ದುಡ್ಡು ಕೊಡ್ತೀನಿ ಬಾ ಅಂತ ಕರೆಸಿಕೊಂಡು. ಆಕೆ ಮನೆಯಲ್ಲಿ ಮಲಗಿದ್ದಾಗ ಅವಳ ಉಸಿರು ಗಟ್ಟಿಸಿ, ಗುದ್ದಲಿಯಿಂದ ತಲೆಗೆ ಹೊಡೆದು ಅವಳ ಕಥೆಯನ್ನ ಮುಗಿಸಿದ್ರು.

ಇದನ್ನೂ ವೀಕ್ಷಿಸಿ:  ಗಂಗಾವತಿಯಲ್ಲಿ ಪೊಲೀಸರ ಮೇಲೆಯೇ ಹಲ್ಲೆ: ಆರೋಪಿ ಕರೆದೊಯ್ಯುವ ವೇಳೆ ಸಿನಿಮೀಯ ರೀತಿಯಲ್ಲಿ ಅಟ್ಯಾಕ್‌