News Hour: 15 ಲಕ್ಷ ಆದಾಯಕ್ಕೂ ತೆರಿಗೆ ವಿನಾಯ್ತಿ?
ಮುಂದಿನ ವರ್ಷದಿಂದ 15 ಲಕ್ಷ ರೂ. ಆದಾಯಕ್ಕೆ ತೆರಿಗೆ ವಿನಾಯಿತಿ ಸಾಧ್ಯತೆ ಇದೆ. ಇನ್ನೊಂದೆಡೆ ಬೆಳಗಾವಿಯಲ್ಲಿ ಕಾಂಗ್ರೆಸ್ ನೂರರ ನೆನಪಿನ ಅದ್ಧೂರಿ ಚಾಲನೆ ಮತ್ತು ಮೋದಿ ಸರ್ಕಾರದ ವಿರುದ್ಧ ಜನಾಂದೋಲನಕ್ಕೆ ನಿರ್ಣಯವಾಗಿದೆ.
ಬೆಂಗಳೂರು (ಡಿ.27): ಮುಂದಿನ ವರ್ಷದಿಂದ ಮಧ್ಯಮವರ್ಗಕ್ಕೆ ಸಿಹಿ ಸುದ್ದಿ ಸಿಗುವ ಲಕ್ಷಣ ಕಂಡಿದೆ. 15 ಲಕ್ಷ ರೂ. ಆದಾಯಕ್ಕೂ ತೆರಿಗೆ ವಿನಾಯಿತಿ ಘೋಷಿಸುವ ಸಾಧ್ಯತೆ ಇದೆ. ಫೆಬ್ರವರಿ ಬಜೆಟ್ ಅಧಿವೇಶನದಲ್ಲಿ ಘೋಷಣೆ ಸಾಧ್ಯತೆ ಆಗಿದೆ.
ಇನ್ನು ಬೆಳಗಾವಿಯಲ್ಲಿ ಕಾಂಗ್ರೆಸ್ ನೂರರ ನೆನಪಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಇಂದು ಕಾರ್ಯಕಾರಿಣಿ ಸಭೆ ನಡೆದಿದೆ. ಮೋದಿ ಸರ್ಕಾರದ ವಿರುದ್ಧ ಜನಾಂದೋಲಕ್ಕೆ ನಿರ್ಣಯ ಮಾಡಲಾಗಿದೆ.ಕಾಂಗ್ರೆಸ್ ಅಧಿವೇಶನ ಸಂಭ್ರಮಕ್ಕೆ ಬಿಜೆಪಿ ವಾಗ್ಬಾಣ ಹೂಡಿದೆ. ಇವರೆಲ್ಲಾ ನಕಲಿ ಗಾಂಧಿಗಳು ಎಂದು ಪ್ರತಿಭಟನೆಗೆ ಸಜ್ಜಾಗಿತ್ತು. ಕಾಂಗ್ರೆಸ್ ಬ್ಯಾನರ್‌ನಲ್ಲಿ ಭಾರತದ ವಿರೂಪ ನಕ್ಷೆಗೆ ಜನಾಕ್ರೋಶ ವ್ಯಕ್ತವಾಗಿದೆ.
ನಿಜವಾಯ್ತು ಕೋಡಿಶ್ರೀಗಳು ನುಡಿದಿದ್ದ 'ಮಾಜಿ ಪ್ರಧಾನಿ ಸಾವು' ಭವಿಷ್ಯ!
ಮೈಸೂರಿನ ಕೆಆರ್‌ಎಸ್ ರಸ್ತೆಗೆ ಸಿದ್ದರಾಮಯ್ಯ ಹೆಸರಿಡುವ ವಿಚಾರದಲ್ಲಿ ಬಿಜೆಪಿ ವರ್ಸಸ್ ಬಿಜೆಪಿ ಫೈಟ್ ಶುರುವಾಗಿದೆ. ಈ ನಿರ್ಧಾರವನ್ನು ಪ್ರತಾಪ್ ಸಿಂಹ ಸಮರ್ಥಿಸಿಕೊಂಡಿದ್ದಕ್ಕೆ ಬಿಜೆಪಿಯಲ್ಲಿ ಟೀಕೆ ವ್ಯಕ್ತವಾಗಿದೆ.