Asianet Suvarna News Asianet Suvarna News

ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟು ನಿಟ್ಟಿನ ರೂಲ್ಸ್ ತಂದ ಡೆಲ್ಲಿ ಸರ್ಕಾರ

ಇಡೀ ದೆಹಲಿಗೆ ಹಣ್ಣು, ತರಕಾರಿ ಪೂರೈಸುವ ಮಾರುಕಟ್ಟೆ ಆಜಾದ್ ಪುರ್‌ ಮಂಡಿಯಲ್ಲಿ ಕೊರೊನಾ ಅಟ್ಟಹಾಸ ಮೆರೆದಿದೆ. ಇಲ್ಲಿನ 11 ಮಂದಿ ವ್ಯಾಪಾರಿಗಳಿಗೆ ಪಾಸಿಟೀವ್ ಬಂದಿದೆ. ಕೂಡಲೇ ಮಂಡಿಯನ್ನು ಕ್ಲೋಸ್ ಮಾಡಲಾಗಿದೆ. 

ನವದೆಹಲಿ(ಮೇ.01) ನೋವೆಲ್ ಕೊರೊನಾಗೆ ರಾಷ್ಟ್ರ ರಾಜಧಾನಿ ದೆಹಲಿ ತತ್ತರಿಸಿ ಹೋಗಿದೆ. ಅಲ್ಲಿನ ಜನ ಆತಂಕದಲ್ಲಿದ್ಧಾರೆ. ಸದ್ಯ ದೆಹಲಿ ರೆಡ್‌ಝೋನ್‌ನಲ್ಲಿದೆ. ಕೊರೋನಾ ದೆಹಲಿಯಲ್ಲಿ ಸೃಷ್ಟಿಸಿದ ಅವಾಂತರಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ. 

ಸಿಆರ್‌ಪಿಎಫ್‌ನ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಕೊರೊನಾದಿಂದ ಮೃತಪಟ್ಟಿದ್ದಾರೆ. ಇನ್ನೊಂದು ಪ್ರಮುಖ ಘಟನೆ ಎಂದರೆ ಇಡೀ ದೆಹಲಿಗೆ ಹಣ್ಣು, ತರಕಾರಿ ಪೂರೈಸುವ ಮಾರುಕಟ್ಟೆ ಆಜಾದ್ ಪುರ್‌ ಮಂಡಿಯಲ್ಲಿ ಕೊರೊನಾ  ಅಟ್ಟಹಾಸ ಮೆರೆದಿದೆ. ಇಲ್ಲಿನ 11 ಮಂದಿ ವ್ಯಾಪಾರಿಗಳಿಗೆ ಪಾಸಿಟೀವ್ ಬಂದಿದೆ. ಕೂಡಲೇ ಮಂಡಿಯನ್ನು ಕ್ಲೋಸ್ ಮಾಡಲಾಗಿದೆ. 

ಕೊರೋನಾ ಆತಂಕ: ಮಂಡ್ಯ ಜಿಲ್ಲಾಡಳಿತದ ಮೇಲೆ ಮಾಜಿ ಸಿಎಂ ಕುಮಾರಸ್ವಾಮಿ ಗರಂ

ಇನ್ನೊಂದು ಸುದ್ದಿಯಾದ ವಿಚಾರ ಎಂದರೆ ದೆಹಲಿಯ ಅತೀ ದೊಡ್ಡ ಮಾರುಕಟ್ಟೆ ಕರೋಲ್‌ಬಾಗ್‌ನಲ್ಲಿ ಕಂಡ ಕಂಡಲ್ಲಿ ಉಗುಳಿದವರಿಗೆ ಕಳೆದ 10 ದಿನಗಳಲ್ಲಿ 235 ಮಂದಿಗೆ ಫೈನ್ ಹಾಕಲಾಗಿದೆ. ದೆಹಲಿಯಲ್ಲಿ ಸದ್ಯ ಹೇಗಿದೆ ಚಿತ್ರಣ? ಎಂಬುದರ ಮಾಹಿತಿ 'ಇಂಡಿಯಾ ರೌಂಡ್ಸ್ ವಿತ್ ಡೆಲ್ಲಿ ಮಂಜು' ನಲ್ಲಿ!