Asianet Suvarna News Asianet Suvarna News

Loksabha Eection 2024: ಕುರುಕ್ಷೇತ್ರ ಕಾದಾಟದಿಂದ ಕೈ ಸಾಮ್ರಾಜ್ಯವೇ ದೂರ..? ಏನಿದು ಹಸ್ತಾಧಿಪತಿಗಳ ಚುನಾವಣಾ ಲೆಕ್ಕಾಚಾರ..?

ಸೋನಿಯಾ ಗಾಂಧಿ ಲೋಕಸಭಾ ಅಭ್ಯರ್ಥಿಯಲ್ವಾ..?
ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯಲ್ಲಿ ನಿಲ್ಲಲ್ವಾ..?
ರಾಹುಲ್ ಗಾಂಧಿ ಅಮೇಥಿ ಸ್ಪರ್ಧೆಯೂ ಸಂದೇಹ..!
 

ಲೋಕಸಭಾ ಚುನಾವಣೆಗೆ(Loksabha) ದಿನಗಣನೆ ಶುರುವಾಗಿದೆ. 7 ಹಂತಗಳಲ್ಲಿ ನಡೆಯಲಿರೋ ಪ್ರಜಾಪ್ರಭುತ್ವದ ಅತಿ ದೊಡ್ಡ ಹಬ್ಬಕ್ಕಾಗಿ ಮತದಾರರು ಅತ್ಯಂತ ಉತ್ಸುಕರಾಗಿದ್ದಾರೆ. ಇತ್ತ ಮತದಾರನ ಮನ ಗೆಲ್ಲಲು ಎಲ್ಲಾ ಪಕ್ಷಗಳ ಪೈಪೋಟಿ ಜೋರಾಗಿದೆ. ಎನ್ ಡಿ ಎ (NDA) ಮೈತ್ರಿಕೂಟವನ್ನ ಹಿಗ್ಗಿಸುತ್ತಾ ಗೆಲುವಿನ ಅಂತರವನ್ನ ಹೆಚ್ಚಿಸಬೇಕು ಅನ್ನೋ ಗೇಮ್ ಪ್ಲಾನ್ ಮಾಡಿಕೊಂಡಿರೋ ಪ್ರಧಾನಿ ಮೋದಿ(Narendra Modi) ಒಂದು ಕಡೆ, ಐಎನ್ಡಿಐಎ ಮಹಾ ಮೈತ್ರಿಯಿಂದ ಮೋದಿಯನ್ನ ಸೋಲಿಸಬೇಕು ಅನ್ನೋ ಸಂಕಲ್ಪ ತೊಟ್ಟಿರೋ ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಇನ್ನೊಂದು ಕಡೆ. ಬಟ್ ಈಗ ಕಾಂಗ್ರೆಸ್ಸಿನ(Congress)ಅತಿರಥರೇ ಚುನಾವಣೆಯಿಂದ ವಿಮುಖರಾಗ್ತಾ ಇದ್ದಾರಾ ಅನ್ನೋ ಅನುಮಾನ ಮೂಡ್ತಾ ಇದೆ. ಒಂದು ಕಡೆ ನರೇಂದ್ರ ಮೋದಿ ನಾಯಕತ್ವದ ಬಿಜೆಪಿ(BJP) ಸಂಪೂರ್ಣ ಗೆಲುವಿನ ವಿಶ್ವಾಸದಲ್ಲಿದೆ. ಗೆಲುವು ಅಷ್ಟೇ ಅಲ್ಲ, ಅತಿ ದೊಡ್ಡ ಗೆಲುವು ಸಾಧಿಸೋಕೆ ಗುರಿಯನ್ನ ಹಾಕಿಕೊಂಡು ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಅಬ್‌ ಕೀ ಬಾರ್ ಚಾರ್ ಸೌ ಪಾರ್ ಅನ್ನೋದೇ ಘೋಷವಾಕ್ಯ. ಬಿಜೆಪಿ ಹಾಗೂ ಮಿತ್ರಪಕ್ಷಗಳ ಗೆಲುವು 400ರ ಗಡಿ ದಾಟಬೇಕು ಅನ್ನೋದು ಸಂಕಲ್ಪ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೇಶಾದ್ಯಂತ ಸಾಲು ಸಾಲು ರ್ಯಾಲಿಯಲ್ಲಿ ತೊಡಗಿದ್ದಾರೆ. 

ಇದನ್ನೂ ವೀಕ್ಷಿಸಿ: Rahul Ghandi on Shakti : ರಾಹುಲ್‌ ಗಾಂಧಿ ಮಾತಾಡಿದ್ದು ಮೋದಿ ವಿರುದ್ಧವೋ..? ಸನಾತನ ವಿರುದ್ಧವೋ..!

Video Top Stories