ಹಿಮಾಚಲಪ್ರದೇಶದಲ್ಲಿ ಅಧಿಕಾರ ಕಳೆದುಕೊಳ್ಳುತ್ತಾ ಕಾಂಗ್ರೆಸ್..? ಪಕ್ಷವನ್ನು ಸಂಕಷ್ಟದ ಸುಳಿಯಿಂದ ತಪ್ಪಿಸುತ್ತಾರಾ ಡಿಕೆಶಿ ?
ಡಿಕೆಶಿ ಮುಂದಿರುವ ಸವಾಲುಗಳಿಗೆ ಇದೆಯಾ ಉತ್ತರ..?
ಹಿ.ಪ್ರದಲ್ಲಿ ಅಧಿಕಾರ ಕಳೆದುಕೊಳ್ಳುತ್ತಾ ಕಾಂಗ್ರೆಸ್..?
ಟ್ವೀಟ್ ಮೂಲಕ ಬೇಸರ ಹಂಚಿಕೊಂಡ ಪ್ರೀಯಾಂಕ
ಟ್ರಬಲ್ ಶೂಟರ್ ಡಿಕೆ ಶಿವಕುಮಾರ್‌ಗೆ(DK shivakumar) ಹೈ ಕಮಾಂಡ್ ಬಿಗ್ ಚಾಲೆಂಜ್‌ವೊಂದನ್ನು ನೀಡಿದೆ. ಹೈಕಮಾಂಡ್ ನೀಡಿದ ಚಾಲೆಂಜ್ ಸ್ವೀಕರಿಸಿದ ಡಿಕೆ ಶಿವಕುಮಾರ್, ತಡ ಮಾಡದೇ ಹಿಮಾಚಲ ಪ್ರದೇಶ( Himachal Pradesh) ತಲುಪಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತ ಡಿಕೆ ಶಿವಕುಮಾರ್‌ಗೆ ಹೈಕಮಾಂಡ್ ಆಗಾಗ ಟಾಸ್ಕ್ ಕೊಡ್ತಾನೇ ಇರುತ್ತೆ. ಎಲ್ಲಿ ಪಕ್ಷ ಸಂಕಷ್ಟದಲ್ಲಿರುತ್ತೋ ಅಲ್ಲಿ ಡಿಕೆಶಿ ಇರ್ತಾರೆ. ದೇಶದ ಯಾವುದೇ ಮೂಲೆಯಲ್ಲಿ ಪಕ್ಷ ಸಂಕಷ್ಟದಲ್ಲಿದ್ದಾಗ, ಹೈಕಮಾಂಡ್ ಡಿಕೆಶಿಗೆ ಬುಲಾವ್ ನೀಡುತ್ತೆ. ಈಗಲೂ ಸಹ ಕಾಂಗ್ರೆಸ್(Congress) ಹೈಕಮಾಂಡ್ ಡಿಕೆಶಿಗೆ ಮತ್ತೊಂದು ಚಾಲೆಂಜ್ ನೀಡಿದೆ. ಹೈಕಮಾಂಡ್ ಆದೇಶದಂತೆ ಡಿಕೆಶಿ ಹಿಮಾಚಲ ಪ್ರದೇಶಕ್ಕೆ ತೆರಳಿದ್ದಾರೆ. ಸದ್ಯ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದೆ. ಹಿಮಾಚಲಪ್ರದೇಶದಲ್ಲಿ ನಡೆದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 40 ಸೀಟುಗಳನ್ನು ಗೆದ್ದುಕೊಂಡಿತ್ತು. ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಹಿಮಾಚಲ ಪ್ರದೇಶದಲ್ಲಿ ಅಧಿಕಾರ ನಡೆಸುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಒಟ್ಟು 68 ವಿಧಾನಸಭಾ ಸೀಟುಗಳಿವೆ. ಅಂದ್ರೆ ಇಲ್ಲಿ ಮ್ಯಾಜಿಕ್ ನಂಬರ್ ಇರೋದೇ 35. 35 ಮ್ಯಾಜಿಕ್ ನಂಬರ್ ಇರುವಲ್ಲಿ ಒಟ್ಟು 40 ಸೀಟ್‌ಗಳನ್ನು ಗೆದ್ದುಕೊಂಡಿರೋ ಕಾಂಗ್ರೆಸ್ ಪಕ್ಷ ಈಗ ಸಂಕಷ್ಟದಲ್ಲಿದೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವ ಸಂಕಷ್ಟಕ್ಕೆ ಬಂದು ತಲುಪಿದೆ.
ಇದನ್ನೂ ವೀಕ್ಷಿಸಿ: Annamalai: ಅಣ್ಣಾಮಲೈ ಮೋಡಿಗೆ ಒಲಿಯುತ್ತಾ ಗೆಲುವು? ಕನ್ನಡದ ಸಿಂಗಂ ಮೇಲೆ ಮೋದಿಗೆಷ್ಟು ನಂಬಿಕೆ..?