ತಮಿಳುನಾಡಿನಲ್ಲಿ ಗವರ್ನರ್‌ V/S ಡಿಎಂಕೆ ಸಂಘರ್ಷ: ರಾಜ್ಯಪಾಲರ ನಡೆಗೆ ಡಿಎಂಕೆ ಶಾಸಕರು, ಸಚಿವರ ರಣಾಕ್ರೋಶ..!

ತಮಿಳುನಾಡಿನಲ್ಲಿ ಗವರ್ನರ್‌ V/S ಡಿಎಂಕೆ ಸರ್ಕಾರ ಸಂಘರ್ಷ
ಕೇರಳದಲ್ಲೂ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಸಂಘರ್ಷ
ಪಶ್ಚಿಮ ಬಂಗಾಳದಲ್ಲೂ ಸರ್ಕಾರ V/S ರಾಜ್ಯಪಾಲರ ಸಂಘರ್ಷ

First Published Feb 13, 2024, 3:28 PM IST | Last Updated Feb 13, 2024, 3:32 PM IST

ಕೆಲ ರಾಜ್ಯಗಳಲ್ಲಿ ಸರ್ಕಾರ ವರ್ಸಸ್ ರಾಜ್ಯಪಾಲರ(Governor)  ಕದನ ಜೋರಾಗಿದೆ. ಈ ಇಬ್ಬರ ನಡೆ ಸಂಘರ್ಷಕ್ಕೆ ಕಾರಣವಾಗ್ತಿದೆ. ಸಂವಿಧಾನಿಕ ಬಿಕ್ಕಟ್ಟನ್ನೂ ಹುಟ್ಟುಹಾಕ್ತಿದೆ ಈ ಸಂಘರ್ಷ. ತಮಿಳುನಾಡಿನಲ್ಲಿ(Tamilnadu) ಗವರ್ನರ್‌ V/S ಡಿಎಂಕೆ ಸರ್ಕಾರದ(DMK Government) ನಡುವೆ ಸಂಘರ್ಷ ನಡೆಯುತ್ತಿದೆ. ವಿಧಾನಸಭೆಯಲ್ಲಿ ಭಾಷಣ ಓದಲು ರಾಜ್ಯಪಾಲ ರವಿ ನಕಾರ ಮಾಡಿದ್ದಾರೆ. ಸರ್ಕಾರ ಸಿದ್ಧಪಡಿಸಿದ ಭಾಷಣ ಓದದೇ ರಾಜ್ಯಪಾಲ ರವಿ ತೆರಳಿದ್ದಾರೆ. 2ನೇ ಬಾರಿಯೂ ಡಿಎಂಕೆ ಸರ್ಕಾರಕ್ಕೆ ರಾಜ್ಯಪಾಲರು ಶಾಕ್ ಕೊಟ್ಟಿದ್ದಾರೆ. ಎರಡೇ ನಿಮಿಷದಲ್ಲಿ ಮಾತು ಮುಗಿಸಿ ರಾಜ್ಯಪಾಲ ರವಿ ತೆರಳಿದ್ದಾರೆ. ಜನರ ಒಳಿತಿಗಾಗಿ ಆರೋಗ್ಯಕರ ಚರ್ಚೆ ಮಾಡಲಿ ಎಂದು ರಾಜ್ಯಪಾಲ ಸಲಹೆ ನೀಡಿದ್ದಾರೆ. ಜೈ ತಮಿಳುನಾಡು, ಜೈ ಭಾರತ ಎಂದು ಭಾಷಣ ಮುಗಿಸಿದ್ದಾರೆ. ಕಳೆದ ಬಾರಿ ಭಾಷಣದಲ್ಲಿ ಒಂದಿಷ್ಟು ಟೀಕೆಯನ್ನು ರಾಜ್ಯಪಾಲರು ಮಾಡಿದ್ದರು. 

ಇದನ್ನೂ ವೀಕ್ಷಿಸಿ:  ರಾಷ್ಟ್ರ ರಾಜಧಾನಿಯಲ್ಲಿ ಮೊಳಗಿದ ರೈತ ಕಹಳೆ: ಅನ್ನದಾತನ ತಡೆಯಲು ಬ್ಯಾರಿಕೇಡ್‌, ತಂತಿಬೇಲಿ ನಿರ್ಮಾಣ

Video Top Stories