ಸ್ಟ್ರೋಕ್ ಆಗೋದನ್ನು ತಪ್ಪಿಸೋಕೆ ಏನ್ಮಾಡ್ಬೇಕು?

ಭಾರತದಲ್ಲಿ ಸ್ಟ್ರೋಕ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅಲ್ಲದೇ ಇದು ಗಂಭೀರ ಆರೋಗ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಅದರಲ್ಲೂ ಯಾರಿಗಾದ್ರೂ ಒಂದು ಬಾರಿ ಸ್ಟ್ರೋಕ್‌ ಆದ್ರೆ ಮತ್ತೆ ಆಗುವ ಚಾನ್ಸ್‌ ಹೆಚ್ಚಿದೆಯಂತೆ. ಈ ಬಗ್ಗೆ ಡಾ.ಶಿವಕುಮಾರ್‌ ಆರ್ ಮಾಹಿತಿ ನೀಡಿದ್ದಾರೆ. 

First Published Feb 29, 2024, 4:09 PM IST | Last Updated Feb 29, 2024, 4:09 PM IST

ಭಾರತದಲ್ಲಿ ಸಾವು ಮತ್ತು ಅಂಗವೈಕಲ್ಯಕ್ಕೆ ಪ್ರಮುಖ ಕಾರಣಗಳಲ್ಲಿ ಸ್ಟ್ರೋಕ್ ಕೂಡ ಒಂದಾಗಿದೆ. ವರ್ಷದಲ್ಲಿ ಬರೋಬ್ಬರಿ1.8 ದಶಲಕ್ಷಕ್ಕೂ ಹೆಚ್ಚು ಜನರು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಪಾರ್ಶ್ವವಾಯು ಅಥವಾ ಸ್ಟ್ರೋಕ್ ಪ್ರಕರಣಗಳು ಹೆಚ್ಚುತ್ತಲಿವೆ. ಅದರಲ್ಲೂ ವಯಸ್ಸಾದವರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ. ರಕ್ತ ಹೆಪ್ಪುಗಟ್ಟುವಿಕೆ (blood clot)ಅಥವಾ ರಕ್ತಸ್ರಾವದಿಂದಾಗಿ ಮೆದುಳಿಗೆ ರಕ್ತ ಪೂರೈಕೆಗೆ ಅಡ್ಡಿಯಾಗುವ ಸ್ಥಿತಿ ಯನ್ನು ಸ್ಟ್ರೋಕ್  ಎನ್ನಲಾಗುತ್ತೆ. ಅದರಲ್ಲೂ ಯಾರಿಗಾದ್ರೂ ಒಂದು ಬಾರಿ ಸ್ಟ್ರೋಕ್‌ ಆದ್ರೆ ಮತ್ತೆ ಆಗುವ ಚಾನ್ಸ್‌ ಹೆಚ್ಚಿದೆಯಂತೆ. ಈ ಬಗ್ಗೆ ಮಣಿಪಾಲ್‌ ಆಸ್ಪತ್ರೆಯ ನರರೋಗ ತಜ್ಞ ಡಾ.ಶಿವಕುಮಾರ್‌ ಆರ್ ಮಾಹಿತಿ ನೀಡಿದ್ದಾರೆ. 

ಸ್ಟ್ರೋಕ್‌ ಆದವರು ವೇಟ್‌ ಲಾಸ್‌ ಮಾಡೋದ್ಹೇಗೆ?

Video Top Stories