ಬೇಸಿಗೆಯಲ್ಲಿ Exercise ಮಾಡಬಹುದಾ? ತಜ್ಞ ವೈದ್ಯರಿಂದ ಮಾಹಿತಿ
ದೇಹಕ್ಕೆ ಆಹಾರ, ನೀರು ಹೇಗೆ ಅಗತ್ಯವೋ ಹಾಗೆಯೇ ಎಕ್ಸರ್‌ಸೈಸ್ ಮಾಡುವುದು ಅಷ್ಟೇ ಮುಖ್ಯ. ವ್ಯಾಯಾಮ ಮಾಡುವುದರಿಂದ ದೇಹ ಸದೃಢವಾಗಿರುತ್ತದೆ. ಯಾವುದೇ ಅನಾರೋಗ್ಯ ಸುಲಭವಾಗಿ ಕಾಡುವುದಿಲ್ಲ. ಆದರೆ ಬೇಸಿಗೆಯಲ್ಲಿ ವ್ಯಾಯಾಮ ಮಾಡಬಹುದಾ? ಈ ಬಗ್ಗೆ ತಜ್ಞ ವೈದ್ಯರು ಏನಂತಾರೆ ತಿಳಿಯೋಣ.
ಆರೋಗ್ಯವಾಗಿರಲು ಎಕ್ಸರ್‌ಸೈಸ್ ಮಾಡುವುದು ಅತೀ ಅಗತ್ಯ. ವ್ಯಾಯಾಮ ಮಾಡುವುದು. ತೂಕವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ, ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ, ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ದೈನಂದಿನ ಚಟುವಟಿಕೆಗಳನ್ನು ಮಾಡುವ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಮಾತ್ರವಲ್ಲ ಎಕ್ಸರ್‌ಸೈಸ್ ಮಾಡುವುದರಿಂದ ಮೆದುಳಿನ ಆರೋಗ್ಯ ಸಹ ಸುಧಾರಿಸುತ್ತದೆ. ಅದ್ರೆ ಬೇಸಿಗೆಯಲ್ಲಿ ದೇಹಕ್ಕೆ ಶ್ರಮ ನೀಡುವ ಎಕ್ಸರ್‌ಸೈಸ್ ಮಾಡಬಹುದಾ? ಈ ಬಗ್ಗೆ ತಜ್ಞ ವೈದ್ಯರಾದ ಡಾ.ಸಾಯಿಕಿರಣ್ ಏನ್ ಹೇಳ್ತಾರೆ ತಿಳಿಯೋಣ.