ಪಾರ್ಶ್ವವಾಯು ಪೀಡಿತರಿಗೆ ಹೊಸ ಆಶಾಕಿರಣ Spinal Cord Implant
ಪಾರ್ಶ್ವವಾಯು ರೋಗಿಗಳು ಖುಷಿ ಪಡುವಂತಾ ಸುದ್ದಿ ಇಲ್ಲಿದೆ. ಕೈ ಕಾಲು ಸ್ವಾಧೀನ ಪಡೆದುಕೊಂಡವರು ಎದ್ದು ನಡೆವಂತೆ ಮಾಡಿದ್ದಾರೆ ಜಪಾನ್ ವಿಜ್ಞಾನಿಗಳು.
ಜಗತ್ತಿನಲ್ಲೇ ಮೊದಲ ಬಾರಿಗೆ ಬೆನ್ನು ಹುರಿ ಮುರಿದವರು ಎದ್ದು ನಡೆವಂಥ ಆಪರೇಶನ್ ಸಕ್ಸಸ್ ಆಗಿದೆ. ಐದು ವರ್ಷದ ಹಿಂದೆ ಸ್ಟ್ರೋಕ್ ಹೊಡೆದು ಸ್ವಾಧೀನ ಕಳೆದುಕೊಂಡಿದ್ದ ವ್ಯಕ್ತಿಗೆ ಜಪಾನ್‌ನ ವಿಜ್ಞಾನಿಗಳು ಸ್ಪೈನಲ್ ಕಾರ್ಡ್ ಇಂಪ್ಲ್ಯಾಂಟ್ ಮಾಡಿ ಯಶಸ್ವಿಯಾಗಿದ್ದಾರೆ. ಈ ಕ್ರಾಂತಿಕಾರಿ ಸಂಶೋಧನೆಯಿಂದ ಲಕ್ಷಾಂತರ ಜನರಲ್ಲಿ ಆಶಾಕಿರಣ ಮೂಡಿದೆ.
Horror Restaurant: ಇಲ್ಲಿ ದೆವ್ವಗಳೇ ಊಟ ಬಡಿಸುತ್ತವೆ, ಬೆಚ್ಚಿ ಬೀಳಿಸುತ್ತವೆ..
ಪ್ಯಾರಾಲಿಸಿಸ್ ಆದವರು ಸಂಪೂರ್ಣ ಸ್ವಾಧೀನ ಕಳೆದುಕೊಳ್ಳುತ್ತಾರೆ. ಹೆಚ್ಚಿನವರು ಕೈ ಕಾಲುಗಳ ಸ್ವಾಧೀನ ಕಳೆದುಕೊಳ್ಳುತ್ತಾರೆ. ಇದನ್ನು ಸರಿ ಪಡಿಸಲು ಅಂಥಾ ಯಾವುದೇ ಪರಿಣಾಮಕಾರಿ ಚಿಕಿತ್ಸೆ ಇರಲಿಲ್ಲ. ಈಗ ಆ ಸ್ಪೈನಲ್ ಕಾರ್ಡ್ ಇದ್ದಲ್ಲಿ ಎಲೆಕ್ಟ್ರಾನಿಕ್ ಇಂಪ್ಲ್ಯಾಂಟ್ ಮಾಡುವುದರಿಂದ ಮೇಲೆ ಕೆಳಗಿನ ನರಗಳನ್ನು ಸೇರಿಸಿ ಅವುಗಳ ನಡುವೆ ಸಿಗ್ನಲ್ ಹೋಗುವಂತೆ ಮಾಡುತ್ತಾರೆ. ಇದರಿಂದ ಕೈ ಕಾಲುಗಳಿಗೆ ಮತ್ತೆ ಸ್ವಾಧೀನ ಬರುತ್ತದೆ. ಇದು ಮೊದಲೇ ಇದ್ದ ತಂತ್ರಜ್ಞಾನವೇ. ಆದರೆ, ಈ ಬಾರಿ ವಿಜ್ಞಾನಿಗಳು, ಇನ್ನೂ ಹೆಚ್ಚಿನ ಫಲಿತಾಂಶ ಕಂಡುಕೊಳ್ಳಲು ಸಾಧ್ಯವಾಗಿದೆ.