ಕಣ್ಣಿನ ಡ್ರೈನೆಸ್ ಇರುವವರು ಲೆನ್ಸ್ ಹಾಕಬಾರದಾ?
ಕನ್ನಡಕ ಕಣ್ಣಿಗೆ ಬರ್ತಿದ್ದಂತೆ ಮುಜುಗರ ಶುರುವಾಗುತ್ತೆ. ಸ್ವಲ್ಪ ದಿನ ಎಲ್ಲರ ಮುಂದೆ ಬರೋಕೆ ಏನೋ ನಾಚಿಕೆ. ದಿನ ಕಳೆದಂತೆ ಸರಿಯಾದ್ರೂ ಅದ್ರಿಂದ ಮುಕ್ತಿ ಪಡೆಯಲು ಜನ ಹೊಸ ವಿಧಾನ ಹುಡುಕ್ತಾರೆ. ಅದೇ ಕಾಂಟ್ಯಾಕ್ಟ್ ಲೆನ್ಸ್. ಆದ್ರೆ ಇದು ಎಷ್ಟು ಸೇಫ್? ಆ ಬಗ್ಗೆ ಮಾಹಿತಿ ಇಲ್ಲಿದೆ.
ಇಡೀ ಪ್ರಪಂಚದ ಸೌಂದರ್ಯವನ್ನು ಸವಿಯಲು ಕಣ್ಣು ಮುಖ್ಯ. 40 ವರ್ಷ ದಾಟಿದ ಮೇಲೆ ಜನರಿಗೆ ದೃಷ್ಟಿ ಸಮಸ್ಯೆಗಳು ಶುರುವಾಗ್ತಿದ್ದ ಕಾಲವೊಂದಿತ್ತು. ಆದ್ರೀಗ ನಾಲ್ಕೈದು ವರ್ಷದ ಮಕ್ಕಳ ಕಣ್ಣಲ್ಲಿ ನಾವು ಕನ್ನಡಕವನ್ನು ನೋಡ್ತಿದ್ದೇವೆ. ಕನ್ನಡಕ ಕಣ್ಣಿಗೆ ಬರ್ತಿದ್ದಂತೆ ಮುಜುಗರ ಶುರುವಾಗುತ್ತೆ. ಹೀಗಾಗಿ ಹೆಚ್ಚಿನವರು ಲೆನ್ಸ್ ಬಳಸೋಕೆ ಆರಂಭಿಸುತ್ತಾರೆ. ಆದ್ರೆ ಲೆನ್ಸ್ ಬಳಸುವಾಗಲೂ ಹಲವಾರು ವಿಚಾರಗಳನ್ನು ಗಮನಿಸಿಕೊಳ್ಳಬೇಕು. ಯಾರು ಬೇಕಾದರೆ ಹಾಗೆ ಎಲ್ಲರೂ ಲೆನ್ಸ್ ಹಾಕುವಂತಿಲ್ಲ. ಲೆನ್ಸ್ ಹಾಕುವಾಗ ಯಾವ ರೀತಿ ಎಚ್ಚರಿಕೆ ವಹಿಸಬೇಕು. ನೇತ್ರ ತಜ್ಞ ಡಾ.ಪ್ರಿಯಾಂಕ್ ಸೋಲಂಕಿ ನೀಡಿರೋ ಮಾಹಿತಿ ಇಲ್ಲಿದೆ.