ಮಕ್ಕಳ ಖಿನ್ನತೆ ದೂರ ಮಾಡಲು ಪೋಷಕರೇ ನೀವೇನು ಮಾಡಬೇಕು..? ಡಾಕ್ಟ್ರು ಹೇಳ್ತಾರೆ ಕೇಳಿ

ಶಾಲೆಗಳಿಲ್ಲದೇ ಮಕ್ಕಳು ವರ್ಷಾನುಗಟ್ಟಲೇ ಮನೆಯಲ್ಲಿಯೇ ಇರುವುದರಿಂದ ನಾನಾ ಸಮಸ್ಯೆಗಳು ಶುರುವಾಗಿದೆ. ಮಕ್ಕಳು ಮೊಬೈಲ್, ಗೇಮ್, ಟ್ಯಾಬ್‌ಗಳ ಮೊರೆ ಹೋಗುತ್ತಿದ್ದಾರೆ. ಅವರಲ್ಲಿ ಸಿಟ್ಟು, ಖಿನ್ನತೆ, ಅಸಹನೆ ಕಂಡು ಬರುತ್ತಿದೆ.

First Published Jun 29, 2021, 9:51 AM IST | Last Updated Jun 29, 2021, 10:09 AM IST

ಬೆಂಗಳೂರು (ಜೂ. 29): ಶಾಲೆಗಳಿಲ್ಲದೇ ಮಕ್ಕಳು ವರ್ಷಾನುಗಟ್ಟಲೇ ಮನೆಯಲ್ಲಿಯೇ ಇರುವುದರಿಂದ ನಾನಾ ಸಮಸ್ಯೆಗಳು ಶುರುವಾಗಿದೆ. ಮಕ್ಕಳು ಮೊಬೈಲ್, ಗೇಮ್, ಟ್ಯಾಬ್‌ಗಳ ಮೊರೆ ಹೋಗುತ್ತಿದ್ದಾರೆ. ಅವರಲ್ಲಿ ಸಿಟ್ಟು, ಖಿನ್ನತೆ, ಅಸಹನೆ ಕಂಡು ಬರುತ್ತಿದೆ.

ಮೂರನೇ ಅಲೆಯಲ್ಲಿ ಈ ಕೆಲವು ಮಕ್ಕಳ ಬಗ್ಗೆ ವಿಶೇಷ ಕಾಳಜಿ ಬೇಕೇ ಬೇಕು

ಪೋಷಕರ ಜೊತೆ ಸಿಡಿಸಿಡಿ, ಊಟ, ತಿಂಡಿ ಸರಿಯಾಗಿ ಮಾಡದೇ ಇರುವುದು, ಮಾತು ಕಡಿಮೆ ಮಾಡುವುದು, ಆಸಕ್ತಿ ಕಳೆದುಕೊಳ್ಳುವುದು..ಹೀಗೆ ಮಕ್ಕಳ ಬೌದ್ಧಿಕ ಬೆಳವಣಿಗೆಯ ಮೇಲೆಯೂ ಪರಿಣಾಮ ಬೀರುತ್ತಿದೆ. ಇಂತಹ ಸಮಯದಲ್ಲಿ ಪೋಷಕರು ಏನು ಮಾಡಬೇಕು..? ಮಕ್ಕಳಿಗೆ ಯಾವ ರೀತಿ ಸಪೋರ್ಟ್ ಮಾಡಬೇಕು..? ಎಂದು ಮನೋವೈದ್ಯರಾದ ಡಾ. ಸತೀಶ್ ರಾಮಯ್ಯ ವಿವರಿಸಿದ್ಧಾರೆ.