ಚಿಕ್ಕ ಮಕ್ಕಳಿಗೆ ಆರೋಗ್ಯ ಸರಿಯಿಲ್ಲಾಂದ್ರೆ ಗೊತ್ತಾಗೋದು ಹೇಗೆ?
ಪುಟ್ಟ ಮಕ್ಕಳ ಆರೋಗ್ಯ ಹದಗೆಡುವುದು ಬೇಗ. ಆದರೆ ಇದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ಪೋಷಕರು ಸಹ ಮಕ್ಕಳ ಆರೋಗ್ಯ ಹದಗೆಟ್ಟಾಗ ಗೊತ್ತಾಗದೆ ತೊಂದರೆ ಅನುಭವಿಸುತ್ತಾರೆ. ಹಾಗಿದ್ರೆ ಮಕ್ಕಳು ಕಾಯಿಲೆಗೆ ತುತ್ತಾಗಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ? ಈ ಬಗ್ಗೆ ತಜ್ಞ ವೈದ್ಯರು ಏನ್ ಹೇಳಿದ್ದಾರೆ ತಿಳಿಯೋಣ.
ಪುಟ್ಟ ಮಕ್ಕಳ ಲಾಲನೆ-ಪೋಷಣೆ ತುಂಬಾ ಕಷ್ಟವಾದ ಕೆಲಸ. ಮಕ್ಕಳ ಎಲ್ಲಾ ಚಟುವಟಿಕೆಗಳ ಮೇಲೆ ಸೂಕ್ಷ್ಮವಾಗಿ ಗಮನ ಹರಿಸಬೇಕು. ಅದರಲ್ಲೂ ಮಕ್ಕಳಿಗೆ ಹುಷಾರು ತಪ್ಪಿದಾಗ ಇನ್ನೂ ಕಷ್ಟ. ಕೆಲವೊಮ್ಮೆ ಮಕ್ಕಳ ಆರೋಗ್ಯ ಸರಿಯಿಲ್ಲದಿದ್ದರೂ ಗೊತ್ತೇ ಆಗುವುದಿಲ್ಲ. ದೊಡ್ಡವರಾದರೆ ಹುಷಾರು ತಪ್ಪಿದಾಗ ಬಾಯಿ ಬಿಟ್ಟು ಹೇಳುತ್ತಾರೆ. ಮಕ್ಕಳಿಗೆ ಅದಾಗುವುದಿಲ್ಲವಲ್ಲ. ಹೀಗಾಗಿಯೇ ಅವರನ್ನು ನೋಡಿಯೇ ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ಈಗಾಗಲೇ ಆರೋಗ್ಯ ಹದಗೆಟ್ಟಿದ್ದಲ್ಲಿ ಮಕ್ಕಳ ಆರೋಗ್ಯ ಮತ್ತಷ್ಟು ಹದಗೆಡೋದು ಖಂಡಿತ. ಹಾಗಿದ್ರೆ ಮಕ್ಕಳ ಆರೋಗ್ಯ ಹದಗೆಟ್ಟಾಗ ತಿಳಿಯುವುದು ಹೇಗೆ?