ಮೊದಲೇ ಟೆಸ್ಟ್ ಮಾಡಿದ್ರೆ, ಹಾರ್ಟ್‌ಅಟ್ಯಾಕ್ ತಡೆಯಬಹುದಾ?
ಇತ್ತೀಚಿನ ಕೆಲ ವರ್ಷಗಳಿಂದ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿವೆ. ವೃದ್ಧರು, ಯುವಕರು ಅನ್ನೋ ವ್ಯತ್ಯಾಸವಿಲ್ಲದೆ ಎಲ್ಲರೂ ಹಾರ್ಟ್ ಅಟ್ಯಾಕ್‌ನಿಂದ ಸಾವನ್ನಪ್ಪುತ್ತಿದ್ದಾರೆ. ಇದಕ್ಕೇನು ಕಾರಣ, ಮೊದಲೇ ಟೆಸ್ಟ್ ಮಾಡೋದ್ರಿಂದ ಹಾರ್ಟ್ ಅಟ್ಯಾಕ್ ಆಗೋದನ್ನು ತಪ್ಪಿಸಬಹುದಾ?
ಹಾರ್ಟ್ ಅಟ್ಯಾಕ್ ಇತ್ತೀಚಿಗೆ ವಯಸ್ಸಿನ ವ್ಯತ್ಯಾಸವಿಲ್ಲದೆ ಎಲ್ಲರನ್ನೂ ಕಾಡುತ್ತಿರುವ ಆರೋಗ್ಯ ಸಮಸ್ಯೆ.ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ, ಡ್ಯಾನ್ಸ್ ಮಾಡುವಾಗ, ವಾಕಿಂಗ್ ಮಾಡುವಾಗ ಹೀಗೆ ಎಲ್ಲೆಂದರಲ್ಲಿ ಕುಸಿದು ಬಿದ್ದು ಸಾವನ್ನಪ್ಪುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ. ಹೃದಯಾಘಾತವಾದವರು ಬದುಕುಳಿಯುವುದು ಕಡಿಮೆ. ಕೆಲವೊಂದು ಸಾರಿ ಮಾತ್ರ ತಕ್ಷಣ ಚಿಕಿತ್ಸೆ ದೊರೆತರೆ ಜೀವ ಉಳಿಯುತ್ತದೆ. ಹಾಗಿದ್ರೆ ಮೊದಲೇ ಪರೀಕ್ಷೆ ಮಾಡಿದ್ರೆ, ಹೃದಯಾಘಾತ ತಡೆಯಬಹುದಾ? ಈ ಬಗ್ಗೆ ತಜ್ಞ ವೈದ್ಯರಾದ ಡಾ.ದೇವಿಪ್ರಸಾದ ಶೆಟ್ಟಿ ಏನ್ ಹೇಳ್ತಾರೆ ತಿಳಿಯೋಣ.