ಸದ್ಗುರು ದಿನವಿಡೀ ಎನರ್ಜಿಯಿಂದ ಕೂಡಿರುವಂತೆ ಮಾಡುವ ಸೂಪರ್‌ಫುಡ್ ಯಾವುದು ಗೊತ್ತಾ? ಇಲ್ಲಿದೆ ಸಿಕ್ರೇಟ್‌

 ಸದ್ಗುರು ಕರೆ ಕೊಟ್ಟಿರುವ ‘ಮಣ್ಣು ಉಳಿಸಿ’ ಜಾಗತಿಕ ಅಭಿಯಾನ  ಅಭಿಯಾನದ ಭಾಗವಾಗಿ ಸದ್ಗುರು ಅವರು 100 ದಿನಗಳಲ್ಲಿ 30 ಸಾವಿರ ಕಿ.ಮೀ. ಬೈಕ್‌ ಯಾತ್ರೆ ನಡೆಸುತ್ತಿದ್ದಾರೆ

First Published May 24, 2022, 5:03 PM IST | Last Updated May 24, 2022, 5:03 PM IST

ನವದೆಹಲಿ (ಮೇ 24): ಈಶಾ ಫೌಂಡೇಷನ್‌ ಸಂಸ್ಥಾಪಕರಾದ ಸದ್ಗುರು (Sadhguru Jaggi Vasudev) ಪಶ್ಚಿಮ ಘಟ್ಟಗಳ ಕಾಡುಗಳಲ್ಲಿ ವಾರಗಟ್ಟಲೆ ಸಮಯ ಕಳೆದಾಗ, ತಮ್ಮ ಜೀವನದಲ್ಲಿ ನಡೆದ ಅದ್ಭುತ ಪ್ರಯಾಣದ ಬಗ್ಗೆ ವಿವರಿಸಿದ್ದಾರೆ. ಈ ವೇಳೆ ತಮ್ಮನ್ನು ತಾವು  ದಿನವೀಡಿ ಶಕ್ತಿಯುತವಾಗಿರಿಸಿಕೊಳ್ಳಲು ಪ್ರತಿದಿನ ಸೇವಿಸುವ ಸೂಪರ್‌ಫುಡ್ (Superfood) ಬಗ್ಗೆ ಮಾಹಿತಿ ನೀಡಿದ್ದಾರೆ. ಸದ್ಗುರು ಕರೆ ಕೊಟ್ಟಿರುವ ‘ಮಣ್ಣು ಉಳಿಸಿ’ (Save Soil) ಜಾಗತಿಕ ಅಭಿಯಾನ  ಅಭಿಯಾನದ ಭಾಗವಾಗಿ ಸದ್ಗುರು ಅವರು 100 ದಿನಗಳಲ್ಲಿ 30 ಸಾವಿರ ಕಿ.ಮೀ. ಬೈಕ್‌ ಯಾತ್ರೆ ನಡೆಸುತ್ತಿದ್ದಾರೆ. ಮಾರ್ಚ್ 21 ರಂದು ಲಂಡನ್‌ನಿಂದ ಆರಂಭವಾದ ಬೈಕ್‌ ಯಾತ್ರೆ ಯುರೋಪ್‌, ಮಧ್ಯ ಏಷ್ಯಾದ 27 ರಾಷ್ಟ್ರಗಳಲ್ಲಿ ಸಾಗುತ್ತಿದೆ. 

ಇದನ್ನೂ ಓದಿ: Save Soil Movement: ‘ಮಣ್ಣು ಉಳಿಸಿ’ಗೆ ಹಾಲಿ, ಮಾಜಿ ಸಿಎಂಗಳ ಬೆಂಬಲ

ಅಲ್ಲಿನ ರಾಜಕೀಯ ನಾಯಕರು, ಉದ್ಯಮಿಗಳು, ಪತ್ರಕರ್ತರು, ಸೆಲೆಬ್ರಿಟಿಗಳು, ಸಾರ್ವಜನಿಕರನ್ನು ಭೇಟಿ ಮಾಡಿ ಮಣ್ಣು ಉಳಿಸುವ ಅನಿವಾರ್ಯತೆಯನ್ನು ಸದ್ಗುರು ಮನದಟ್ಟು ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಆ ದೇಶಗಳ ಸರ್ಕಾರಗಳಿಗೆ ನೀತಿಗಳನ್ನು (Policy) ರೂಪಿಸುವ ಮೂಲಕ ತುರ್ತು ಕ್ರಮ ಕೈಗೊಳ್ಳುವಂತೆ ಸಲಹೆ ನೀಡುತ್ತಿದ್ದಾರೆ. ಈಗಾಗಲೇ ಹಲವು ದೇಶಗಳ ಮುಖ್ಯಸ್ಥರು, ಜಾಗತಿಕ ನಾಯಕರು, ವಿಜ್ಞಾನಿಗಳು, ಪರಿಸರ ಸಂರಕ್ಷಣಾ ಸಂಸ್ಥೆಗಳು ಹಾಗೂ ವಿಶ್ವಸಂಸ್ಥೆ ಅಂಗ ಸಂಸ್ಥೆಗಳು ಅಭಿಯಾನಕ್ಕೆ ಬೆಂಬಲ ಸೂಚಿಸಿವೆ.