MySore: ಹಳಸಿದ ಸಾಂಬಾರ್ ಕೊಟ್ಟ ಹೋಟೆಲ್ ಮೇಲೆ ಗ್ರಾಹಕ ಗರಂ
ಹಳಸಿದ ಸಾಂಬಾರ್ ಕೊಟ್ಟ ಹೋಟೆಲ್ ಸಿಬ್ಬಂದಿ ಮೇಲೆ ಗರಂ ಆದ ಮೈಸೂರಿನ ಗ್ರಾಹಕ ಈ ಸಂಬಂಧ ವಿಡಿಯೋ ಮಾಡಿ ಸೋಷ್ಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.
ಕೆಟ್ಟು ಹೋದ ಸಾಂಬಾರ್ ನೀಡಿದ ಹೋಟೆಲ್‌ಗೆ ಗ್ರಾಹಕ ಗ್ರಹಚಾರ ಬಿಡಿಸಿದ್ದಾರೆ. ಮೈಸೂರಿನ ಪ್ರತಿಷ್ಠಿತ ಮೈಸೂರು ಮೈಲಾರಿ ಹೋಟೆಲ್‌ನಲ್ಲಿ ದೋಸೆ ತೆಗೆದುಕೊಂಡ ಗ್ರಾಹಕನಿಗೆ ತಿಂಡಿಯ ಜೊತೆ ಸರ್ವ್ ಮಾಡಿದ ಸಾಂಬಾರ್ ಕೆಟ್ಟು ಹೋಗಿತ್ತು. ಇದರಿಂದ ಕೆರಳಿದ ಗ್ರಾಹಕ ಈ ಸಂಬಂಧ ಆಕ್ಷೇಪ ವ್ಯಕ್ತಪಡಿಸಿ ವಿಡಿಯೋವೊಂದನ್ನು ಮಾಡಿದ್ದು, ವಿಡಿಯೋದಲ್ಲಿ ಹೋಟೆಲ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
'ಪ್ರತಿಷ್ಠಿತ ಹೋಟೆಲ್‌ನಲ್ಲಿ ಸ್ವಚ್ಛತೆ ಚೆನ್ನಾಗಿರುತ್ತದೆ, ಆಹಾರ ಉತ್ತಮವಾಗಿರುತ್ತದೆ ಎಂದುಕೊಂಡು ಬರುತ್ತೇವೆ. ಆದರೆ, ಇಲ್ಲೇ ಹುಳಿ ಬಂದ ಸಾಂಬಾರ್ ನೀಡಿದ್ದಾರೆ. 150 ರೂ. ದೋಸೆ ತಿಂದು ಸಾವಿರ ರೂ. ಚಿಕಿತ್ಸೆಗೆ ಕಟ್ಟಬೇಕ' ಎಂದು ಗ್ರಾಹಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Health Tips: ಮಕ್ಕಳಲ್ಲಿ ಹೆಚ್ಚಾಗಿದೆ ಅಪಾಯಕಾರಿ ಎನರ್ಜಿ ಡ್ರಿಂಕ್ಸ್ ಸೇವನೆ
ಇದಕ್ಕೆ ಪ್ರತಿಯಾಗಿ ಮ್ಯಾನೇಜರ್ ಸಾಂಬಾರ್ ಮೂಸಿ ನೋಡಿ, ಅದು ನಿಜವಾಗಿಯೂ ಕೆಟ್ಟಿದ್ದರಿಂದ ಮರು ಮಾತಾಡದೆ ಸುಮ್ಮನಾಗಿದ್ದಾರೆ. ಹಣದಲ್ಲಿ ಡಿಸ್ಕೌಂಟ್ ಕೊಡುತ್ತೇವೆಂದರೂ ಕೇಳದ ಗ್ರಾಹಕ, ಹೋಟೆಲ್‌ನ ಈ ಅಸಡ್ಡೆಗೆ ಸರಿಯಾದ ಪಾಠ ಕಲಿಸುವುದಾಗಿ ಹೇಳಿದ್ದಾರೆ.