ಮಕ್ಕಳಿಗೆ ಕೊಡೋ ಹಾಲಿಗೆ ಈ ಹೋಮ್‌ಮೇಡ್ ಪುಡಿ ಸೇರಿಸಿದ್ರೆ ಸ್ಟ್ರಾಂಗ್ ಆಗ್ತಾರೆ
ಹಾಲನ್ನು ಅಮೃತ ಎಂದೇ ಪರಿಗಣಿಸಲಾಗುತ್ತದೆ. ಪ್ರತಿ ದಿನ ಹಾಲು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಣ್ಣ ವಯಸ್ಸಿನಿಂದಲೇ ಹಿರಿಯರು ಹೇಳಿಕೊಂಡು ಬರುತ್ತಾರೆ. ಆದರೆ ಮಕ್ಕಳಿಗೆ ಕೊಡುವ ಹಾಲು ಹೇಗಿದ್ದರೆ ಚೆಂದ. ಇದಕ್ಕೆ ಏನನ್ನು ಮಿಕ್ಸ್ ಮಾಡಿ ಕೊಡೋದು ಒಳ್ಳೆಯದು?
ಹಾಲಿನಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೇರಳವಾಗಿದೆ. ಹಾಲು ಕುಡಿಯುವುದರಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ. ಹೀಗಾಗಿಯೇ ಪೋಷಕರು ಚಿಕ್ಕಂದಿನಲ್ಲೇ ಮಕ್ಕಳಿಗೆ ಹಾಲು ಕುಡಿಯಲು ಅಭ್ಯಾಸ ಮಾಡಿಸುತ್ತಾರೆ. ಆದರೆ ಹೆಚ್ಚಿನವರು ಮಕ್ಕಳಿಗೆ ಹಾಲಿಗೆ ಸಕ್ಕರೆ ಸೇರಿಸಿ ಕೊಡುತ್ತಾರೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರ ಬದಲಿಗೆ ಮನೆಯಲ್ಲಿ ತಯಾರಿಸಿದ ಒಣಹಣ್ಣುಗಳನ್ನು ಪುಡಿಯನ್ನು ಹಾಲಿಗೆ ಸೇರಿಸಿ ಮ್ಕಳಿಗೆ ಕೊಡಬಹುದು. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಆರೋಗ್ಯ ತಜ್ಞ ಸಯ್ಯದ್ ಮುಜಾಹಿದ್ ಹುಸೇನ್ ನೀಡಿದ್ದಾರೆ.
ಮಕ್ಕಳ ಆರೋಗ್ಯಕ್ಕೆ ಹಸಿ ಮೊಟ್ಟೆ ಅಥವಾ ಬೇಯಿಸಿದ ಮೊಟ್ಟೆ, ಯಾವುದು ಒಳ್ಳೇದು?