ಗೌರಿ ಹಬ್ಬ 2022: ಗೌರಿ ಪೂಜೆಯನ್ನು ಗಣೇಶ ಚತುರ್ಥಿಯಂದೇ ಮಾಡಬಹುದೇ?
ಗೌರಿ ಪೂಜೆಯನ್ನು ಯಾವತ್ತು ಆಚರಿಸಬೇಕು? ಗಣಪತಿ ಹಬ್ಬದ ದಿನ ಕೂಡಾ ಗೌರಿ ಹಬ್ಬ ಆಚರಿಸಬಹುದೇ? ಶಾಸ್ತ್ರಿಗಳೇನಂತಾರೆ?
ಗೌರಿ ಹಬ್ಬವೆಂದರೆ ಕೈಲಾಸದಿಂದ ಬರುವ ಗೌರಿದೇವಿಯನ್ನು ತವರಿಗೆ ಬರ ಮಾಡಿಕೊಳ್ಳುವ ಸಂಭ್ರಮ ಎಲ್ಲೆಡೆ ಮನೆ ಮಾಡುತ್ತದೆ. ಭಾದ್ರಪದ ಶುಕ್ಲ ಪಕ್ಷದ ತದಿಗೆಯಂದು ಗೌರಿ ಹಬ್ಬ ಆಚರಿಸಲಾಗುತ್ತದೆ. ಈ ಗೌರಿ ಹಬ್ಬವನ್ನು ಗಣೇಶ ಚತುರ್ಥಿಯಂದೇ ಮಾಡಬಹುದೇ? ಪಾರ್ವತಿ- ಗಣಪತಿ ಅಮ್ಮ ಮಗ ಇಬ್ಬರನ್ನೂ ಒಂದೇ ದಿನ ಕೂರಿಸಿ ಪೂಜಿಸಬಹುದೇ?