Asianet Suvarna News Asianet Suvarna News
breaking news image

ರಾಮನವಮಿ ಸಂಭ್ರಮ: ಬಾಲರಾಮನಿಗೆ ಸೂರ್ಯಾಭಿಷೇಕ.. ಸೂರ್ಯ ತಿಲಕದ ರಹಸ್ಯವೇನು..?

ಬರೋಬ್ಬರಿ 500 ವರ್ಷಗಳ ಕಾಲ ಕಾದ ಪ್ರತಿಫಲ, ಭಗವಾನ್ ರಾಮನ ಜನ್ಮಸ್ಥಳದಲ್ಲಿ ಗರ್ಭಗುಡಿಯಲ್ಲಿ ವಿರಾಜಮಾನನಾಗಿರುವ ಬಾಲರಾಮನಿಗೆ ಸೂರ್ಯದೇವ ಅಭಿಷೇಕ ಮಾಡಿದ್ದಾನೆ. ಬಾಲರಾಮನ ಹಣೆಗೆ 3 ನಿಮಿಷ ಸೂರ್ಯರಶ್ಮಿ ಸ್ಪರ್ಶ ಮಾಡಿದ್ದು, ಅದನ್ನ ನೋಡಿದ ಭಕ್ತರು ಪುನೀತರಾಗಿದ್ದಾರೆ. 

ಅಯೋಧ್ಯೆ(ಏ.18):  ಎಲ್ಲೆಡೆ ಜೈ ಶ್ರೀರಾಮ್.. ಜೈಜೈ ಶ್ರೀರಾಮ್ ಘೋಷಣೆ ಮೊಳಗ್ತಿದೆ.. ಅದರಲ್ಲೂ ಅಯೋಧ್ಯೆಯಲ್ಲಿ ರಾಮನವಮಿ ಸಂಭ್ರಮ ಮುಗಿಲು ಮುಟ್ಟಿತ್ತು. ರಾಮ ಲಲ್ಲಾನ ಮೂರ್ತಿ ಪ್ರತಿಷ್ಠಾಪನೆಯ ನಂತರದ ಮೊದಲ ಮಹತ್ವದ ರಾಮನವಮಿ ಇದಾಗಿದ್ದು, ಬರೋಬ್ಬರಿ 500 ವರ್ಷಗಳ ಕಾಲ ಕಾದ ಪ್ರತಿಫಲ, ಭಗವಾನ್ ರಾಮನ ಜನ್ಮಸ್ಥಳದಲ್ಲಿ ಗರ್ಭಗುಡಿಯಲ್ಲಿ ವಿರಾಜಮಾನನಾಗಿರುವ ಬಾಲರಾಮನಿಗೆ ಸೂರ್ಯದೇವ ಅಭಿಷೇಕ ಮಾಡಿದ್ದಾನೆ. ಬಾಲರಾಮನ ಹಣೆಗೆ 3 ನಿಮಿಷ ಸೂರ್ಯರಶ್ಮಿ ಸ್ಪರ್ಶ ಮಾಡಿದ್ದು, ಅದನ್ನ ನೋಡಿದ ಭಕ್ತರು ಪುನೀತರಾಗಿದ್ದಾರೆ. ಹಾಗಾದ್ರೆ ಶ್ರೀರಾಮನೂರಿನಲ್ಲಿ ರಾಮನವಮಿಯ ಗತವೈಭವ ಹೇಗಿತ್ತು..? ಬನ್ನಿ ನೋಡೋಣ..

ಜೈ ಶ್ರೀರಾಮ್ ಹೇಳಂಗಿಲ್ಲ, ಕೇವಲ ಅಲ್ಲಾಹು ಅಕ್ಬರ್ ಮಾತ್ರ, ಬೆಂಗಳೂರಲ್ಲಿ ಯವಕರ ವಾರ್ನಿಂಗ್!

ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣದ ಬಳಿಕ ಮೊದಲ ರಾಮನಮಮಿ ಅದ್ಧೂರಿಯಾಗಿ ಆಚರಿಸಲಾಗಿದೆ.. ಪ್ರಭು ಶ್ರೀರಾಮನಿಗೆ ಸ್ಪರ್ಶಿಸಿದ ಸೂರ್ಯರಶ್ಮಿ ವಿಸ್ಮಯವನ್ನು ಲಕ್ಷಾಂತರ ಭಕ್ತರು ಕಣ್ತುಂಬಿಕೊಂಡ್ರು. ಅಯೋಧ್ಯೆ ಮಾತ್ರವಲ್ಲ.. ದೇಶಾದ್ಯಂತ ಈ ಬಾರಿ ರಾಮೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯ್ತು.. ಅಲ್ದೆ ರಾಜ್ಯದಲ್ಲೂ ರಾಮನವಮಿ ಸಂಭ್ರಮ ಕಳೆಗಟ್ಟಿತ್ತು.

Video Top Stories