Asianet Suvarna News Asianet Suvarna News

ಹಿರಣ್ಯಾಕ್ಷನಿಂದ ಭೂಮಿಯನ್ನು ತರಲು ವರಹ ನೆರವಾಗಿದ್ದು ಹೀಗೆ

Jun 9, 2021, 3:41 PM IST

ಒಮ್ಮೆ ಸ್ವಯಂಬವ ಮನು, ಬ್ರಹ್ಮನ ಬಳಿ ಬಂದು ಸೃಷ್ಟಿ ಕ್ರಿಯೆಗೆ ಸೂಕ್ತವಾದ ಜಾಗ ತೋರಿಸು ಎನ್ನುತ್ತಾನೆ. ಆಗ ಎಲ್ಲವೂ ಜಲಮಯವಾಗಿದೆಯಲ್ಲಾ ಎಂದು ಯೋಚಿಸಿ, ವಿಷ್ಣುಮೂರ್ತಿಯನ್ನು ಪ್ರಾರ್ಥಿಸುತ್ತಾನೆ. ವಿಷ್ಣುವಿನ ಮೂಗಿನಿಂದ ಹಂದಿ ಮರಿ ಹೊರ ಬರುತ್ತದೆ. ಪರ್ವತಾಕಾರವಾಗಿ ಬೆಳೆಯುತ್ತಿದೆ. ಎಲ್ಲರೂ ಆದಿ ವರಹ ಮೂರ್ತಿ ಪ್ರಾರ್ಥಿಸುತ್ತಾರೆ.

ಪ್ರಕೃತಿ ಸ್ವರೂಪಿಣಿಯಾದ ಶ್ರೀ ಮಾತೆಯ 5 ರೂಪಗಳಿವು

ಆಗ ವರಹ ಸಮುದ್ರಕ್ಕೆ ಜಿಗಿದು ಭೂಮಿಯನ್ನು ಎತ್ತಿ ಹಿಡಿಯುತ್ತದೆ. ಈ ವೇಳೆ ಅಡ್ಡ ಬಂದ ಹಿರಣ್ಯಾಕ್ಷನನ್ನು ಸಂಹರಿಸುತ್ತದೆ. ನಂತರ ಬ್ರಹ್ಮ, ಸ್ವಯಂಭವ ಮನುವಿಗೆ ಮಾನವ ಸೃಷ್ಟಿಗೆ ಭೂಮಿಯನ್ನು ನೀಡುತ್ತಾನೆ. ಈ ಕಥೆಯನ್ನು ಕೇಳಿದವರಿಗೂ, ಹೇಳಿದವರಿಗೂ ಸರ್ವಪಾಪ ನಿವಾರಣೆಯಾಗುವುದು. 

Video Top Stories