Asianet Suvarna News

ಪ್ರಕೃತಿ ಸ್ವರೂಪಿಣಿಯಾದ ಶ್ರೀ ಮಾತೆಯ 5 ರೂಪಗಳಿವು

Jun 9, 2021, 4:42 PM IST

ಪ್ರಕೃತಿ ಸ್ವರೂಪಿಣಿಯಾದ ಶ್ರೀ ಮಾತೆ 5 ಸ್ವರೂಪಗಳನ್ನು ತಾಳಿದ್ದಾರೆ. ದುರ್ಗಾದೇವಿ/ ನಾರಾಯಣಿ- ಧರ್ಮ, ಸತ್ಯಗಳ ಸ್ವರೂಪ ತಾನಾಗಿದ್ದಾಳೆ. ಈ ಶಕ್ತಿಯನ್ನು ಆರಾಧಿಸಿದವರಿಗೆ ನಿರ್ಮಲ ಮನಸ್ಸು ಅವರದ್ದಾಗುತ್ತದೆ. ಬೇಡಿದವರ ಇಷ್ಟಾರ್ಥ ನೆರವೇರಿಸುತ್ತಾಳೆ.

ಎರಡನೇ ರೂಪ ಮಹಾಲಕ್ಷ್ಮೀ- ಸಕಲ ಸಂಪತ್ತುಗಳಿಗೂ ಅಧಿಷ್ಠಾನ ದೇವತೆ. ಸಕಲ ಜೀವಕೋಟಿಗಳಲ್ಲೂ ದಯಾರೂಪಿಯಾಗಿದ್ದಾಳೆ. ಮೂರನೇ ಶಕ್ತಿ ಸರಸ್ವತಿ- ವಾಕ್ಚಾತುರ್ಯ, ಬುದ್ಧಿಸಕ್ತಿ, ವಿವೇಕವನ್ನು ಕರುಣಿಸುತ್ತಾಳೆ. ನಾಲ್ಕನೇ ಶಕ್ತಿ ಸಾವಿತ್ರಿ ದೇವಿ. ಈ ಮಾತೆಯಿಂದಲೇ ನಾಲ್ಕು ವರ್ಣಗಳು ಆವಿರ್ಭವಿಸಿದೆ. ಐದನೇ ಶಕ್ತಿ ರಾಧಾದೇವಿ, ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯವಾದಗಳು. ಇವಳನ್ನು ಆರಾಧಿಸಿದವರಿಗೆ ಸುಖ, ಆಹ್ಲಾದಗಳನ್ನು ಕರುಣಿಸುತ್ತಾಳೆ.