ಅಧಿ ಭೌತಿಕ- ಅಧಿ ದೈವಿಕ- ಅಧ್ಯಾತ್ಮಿಕ ಪರಿಹಾರ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರ

ಕರ್ನಾಟಕದ ಒಂದು ಅಪೂರ್ವ ಕ್ಷೇತ್ರ ಉಚ್ಚಿಲ ಮಹಾಲಕ್ಷ್ಮೀ ಶ್ರೀ ಕ್ಷೇತ್ರ. ಶ್ರೀಕ್ಷೇತ್ರದ ಮಹತ್ವವೆಂದರೆ ಇಲ್ಲಿ ಯಾರು ಬೇಡಿಕೊಂಡರೂ ಅವರ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಅದಕ್ಕೆ ಕಾರಣ ಈ ಕ್ಷೇತ್ರದ ಮೂರು ದಿವ್ಯ ಶಕ್ತಿಗಳು. 

First Published Aug 6, 2022, 5:07 PM IST | Last Updated Aug 6, 2022, 5:09 PM IST

ಕರ್ನಾಟಕದ ಒಂದು ಅಪೂರ್ವ ಕ್ಷೇತ್ರ ಉಚ್ಚಿಲ ಮಹಾಲಕ್ಷ್ಮೀ ಶ್ರೀ ಕ್ಷೇತ್ರ. ಶ್ರೀಕ್ಷೇತ್ರದ ಮಹತ್ವವೆಂದರೆ ಇಲ್ಲಿ ಯಾರು ಬೇಡಿಕೊಂಡರೂ ಅವರ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಅದಕ್ಕೆ ಕಾರಣ ಈ ಕ್ಷೇತ್ರದ ಮೂರು ದಿವ್ಯ ಶಕ್ತಿಗಳು. 

'ಸುವರ್ಣ' ಲಕ್ಷ್ಮಿಯರ ಜೊತೆ ವರಮಹಾಲಕ್ಷ್ಮೀ ಆಚರಣೆ

ಇಲ್ಲಿ ನಾಗ, ಭದ್ರಕಾಳಿ ಹಾಗೂ ಮಹಾಲಕ್ಷ್ಮೀ ಸನ್ನಿಧಾನಗಳಿವೆ. ಈ ಸನ್ನಿಧಾನಗಳ ದರ್ಶನದಿಂದ ಮನುಷ್ಯರ ಸಮಸ್ಯೆಗಳು ತಕ್ಷಣದಲ್ಲಿ ಪರಿಹಾರವಾಗುತ್ತವೆ. ಸಾಮಾನ್ಯವಾಗಿ ಮನುಷ್ಯರಿಗೆ ಬಂದೊದಗುವ ಸಂಕಟಗಳು ಮೂರು ರೀತಿಯಲ್ಲೇ ಇರುತ್ತವೆ. ಅವೇ ಅಧಿ ಭೌತಿಕ- ಅಧಿ ದೈವಿಕ- ಅಧ್ಯಾತ್ಮಿಕ ಕಂಟಕಗಳು. ಈ ಸಂಕಟಗಳಿಂದ ಹೊರಬರಲಿಕ್ಕೆ ಈ ಕ್ಷೇತ್ರ ದರ್ಶನವೇ ಮಹಾ ಸಾಧನ.  

ಇಲ್ಲಿನ ನಾಗಾಲಯದಲ್ಲಿ ಆದಿ ದೈವಿಕ ಸಮಸ್ಯೆಗಳು ಪರಿಹಾರವಾದರೆ, ಇಲ್ಲಿನ ಭದ್ರಕಾಳಿ ಆದಿ ಭೌತಿಕವಾದ ಸಮಸ್ಯೆಗಳನ್ನು ಪರಿಹರಿಸುತ್ತಾಳೆ. ಇನ್ನು ಕೇಂದ್ರ ಶಕ್ತಿ ಮಹಾಲಕ್ಷ್ಮೀ ಆಧ್ಯಾತ್ಮಿಕ ಕಂಟಕಗಳನ್ನು ಪರಿಹರಿಸಿ ಭಕ್ತರನ್ನು ಸಂಪೂರ್ಣ ಅನುಗ್ರಹಿಸುತ್ತಾರೆ.