ಶಂತನುವಿಗೆ ಮಗ ದೇವವ್ರತವನ್ನು ಒಪ್ಪಿಸಿದ ಗಂಗೆ, ಭಾವುಕ ಕ್ಷಣಕ್ಕೆ ಸಾಕ್ಷಿಯಾಯ್ತು ಅಪ್ಪ-ಮಗನ ಭೇಟಿ
ಒಂದು ದಿನ ಶಂತನು ಬೇಟೆಗೆ ಹೋದಾಗ ಜಿಂಕೆಗೆ ಬಾಣ ಹೊಡೆಯುತ್ತಾನೆ. ಜಿಂಕೆ ಬಹಳ ದೂರ ಓಡಿ ಹೋಗುತ್ತದೆ. ಜಿಂಕೆಯನ್ನು ಹುಡುಕುತ್ತಾ ಶಂತನು ಗಂಗಾ ನದಿ ದಂಡೆಯ ಮೇಲೆ ಹೋಗುತ್ತಾನೆ.
ಒಂದು ದಿನ ಶಂತನು ಬೇಟೆಗೆ ಹೋದಾಗ ಜಿಂಕೆಗೆ ಬಾಣ ಹೊಡೆಯುತ್ತಾನೆ. ಜಿಂಕೆ ಬಹಳ ದೂರ ಓಡಿ ಹೋಗುತ್ತದೆ. ಜಿಂಕೆಯನ್ನು ಹುಡುಕುತ್ತಾ ಶಂತನು ಗಂಗಾ ನದಿ ದಂಡೆಯ ಮೇಲೆ ಹೋಗುತ್ತಾನೆ. ಗಂಗೆಯಲ್ಲಿ ಹೆಚ್ಚು ನೀರಿರಲಿಲ್ಲ. ಶಂತನುವಿಗೆ ಅಚ್ಚರಿಯಾಗಿ ಮುಂದೆ ಹೋಗುತ್ತಾನೆ. ಅಲ್ಲೊಬ್ಬ ಸುಂದರವಾದ ಬಾಲಕ ನಿಂತಿದ್ದ. ಆ ಬಾಲಕನನ್ನು ನೋಡಿ ಈತ ನನ್ನ ಮಗನೇ ಇರಬಹುದಾ ಎನಿಸಿತು. ಗಂಗೆಯಲ್ಲಿ ನನ್ನ ಮಗನನ್ನು ತೋರಿಸು ಎಂದು ಬೇಡಿಕೊಳ್ಳುತ್ತಾನೆ. ಆಗ ಗಂಗೆ ಆ ಬಾಲಕನನ್ನು ಶಂತನುವಿಗೆ ಒಪ್ಪಿಸುತ್ತಾಳೆ. ಆತನ ಹೆಸರು ದೇವವ್ರತ. ಮುಂದೆ ದೇವವ್ರತ ರಾಜ್ಯಭಾರ ನಡೆಸುತ್ತಾನೆ.