ಪೃತು ಮಹಾರಾಜನ ಚರಿತ್ರೆಯ ಶ್ರವಣದಿಂದ ಧರ್ಮ, ಅರ್ಥ, ಕಾಮ, ಮೋಕ್ಷಗಳ ಸಿದ್ಧಿ ಉಂಟಾಗುತ್ತದೆ

100 ಅಶ್ವಮೇಧ ಯಾಗಗಳನ್ನು ಮಾಡಿ ಶತಕೃತಿ ಎನಿಸಿಕೊಂಡ ಇಂದ್ರನಿಗೆ ಪೃತುವಿನ ಮೇಲೆ ಹೊಟ್ಟೆಕಿಚ್ಚಾಗುತ್ತದೆ. ಅನೇಕ ಸಾರಿ ಯಜ್ಷವನ್ನು ನಾಶ ಮಾಡುವ ಪ್ರಯತ್ನ ಮಾಡುತ್ತಾನೆ. ಆಗ ಬ್ರಹ್ಮ ಪೃತುವಿಗೆ ಬುದ್ದಿವಾದ ಹೇಳುತ್ತಾನೆ. 

First Published Dec 14, 2020, 10:18 AM IST | Last Updated Dec 14, 2020, 6:21 PM IST

100 ಅಶ್ವಮೇಧ ಯಾಗಗಳನ್ನು ಮಾಡಿ ಶತಕೃತಿ ಎನಿಸಿಕೊಂಡ ಇಂದ್ರನಿಗೆ ಪೃತುವಿನ ಮೇಲೆ ಹೊಟ್ಟೆಕಿಚ್ಚಾಗುತ್ತದೆ. ಅನೇಕ ಸಾರಿ ಯಜ್ಷವನ್ನು ನಾಶ ಮಾಡುವ ಪ್ರಯತ್ನ ಮಾಡುತ್ತಾನೆ. ಆಗ ಬ್ರಹ್ಮ ಪೃತುವಿಗೆ ಬುದ್ದಿವಾದ ಹೇಳುತ್ತಾನೆ. ಅವನು ಶ್ರೀಹರಿಯ ಸಮಾನ. ಅವನಿಗೆ ಸಮಾನವಾದ 100 ಯಜ್ಷಗಳನ್ನು ಮಾಡಬೇಡ ಎನ್ನುತ್ತಾನೆ.

ಭೂಮಿಗೆ 'ಪೃಥ್ವಿ' ಎಂದು ಹೆಸರು ಬಂದಿದ್ಹೇಗೆ? ಹಿಂದಿದೆ ಈ ಪೌರಾಣಿಕ ಕಥೆ..!

ಅಲ್ಲಿಗೆ ಪೃಥು ಯಜ್ಞವನ್ನು ನಿಲ್ಲಿಸುತ್ತಾನೆ. ಈ ಸಮಯದಲ್ಲಿ ಶ್ರೀ ಹರಿ ಪ್ರತ್ಯಕ್ಷನಾಗುತ್ತಾನೆ. ನೀನು ಇಂದಿಯಗಳನ್ನು, ಮನಸ್ಸನ್ನು ನಿಗ್ರಹಿಸಿ ಸುಖದುಃಖಗಳನ್ನು ಸಮನಾಗಿ ನೋಡು. ಎಲ್ಲರನ್ನೂ ಪ್ರೀತಿಯಿಂದ ನೋಡು. ಇದಿಲ್ಲದೇ ನೀನು ಎಷ್ಟೇ ಯಜ್ಞವನ್ನು ಮಾಡಿದರೂ ಪ್ರಯೋಜನವಿಲ್ಲ. ನಿನಗೆ ಬೇಕಾದ ವರ ಕೇಳು ಎನ್ನುತ್ತಾನೆ. ನಿನ್ನ ನಾಮಸ್ಮರಣೆಯೊಂದೇ ಸಾಕು ಎನ್ನುತ್ತಾನೆ. ಮುಂದೆ ಪ್ರಜೆಗಳಿಗೆ ಈ ರೀತಿ ಧರ್ಮಭೋಧನೆ ಮಾಡುತ್ತಾನೆ.