ಭೂಮಿಗೆ 'ಪೃಥ್ವಿ' ಎಂದು ಹೆಸರು ಬಂದಿದ್ಹೇಗೆ? ಹಿಂದಿದೆ ಈ ಪೌರಾಣಿಕ ಕಥೆ..!
ಪೃತು ಚಕ್ರವರ್ತಿ ರಾಜನಾಗುತ್ತಾನೆ. ಭೂಮಾತೆಯ ರೀತಿ ಸಹನಾಮೂರ್ತಿ ಅಗಿರುತ್ತಾನೆ ಪ್ರಜೆಗಳ ಒಳಿತಿಗೆ ಶ್ರಮಿಸುತ್ತಾನೆ. ಪ್ರಜೆಗಳೂ ಕೂಡಾ ಪೃತು ಚಕ್ರವರ್ತಿಯನ್ನು ರಾಜ ಎಂದು ಪೂಜಿಸುತ್ತಾರೆ. ಆತನ ಆಡಳಿತ ಶುರುವಾದ ನಂತರ ಮಳೆ, ಬೆಳೆಗಳಿಲ್ಲದೇ ಕ್ಷಾಮ ಉಂಟಾಗುತ್ತದೆ. ಪ್ರಜೆಗಳೆಲ್ಲವೂ ಕಂಗಾಲಾಗುತ್ತಾರೆ.
ಪೃತು ಚಕ್ರವರ್ತಿ ರಾಜನಾಗುತ್ತಾನೆ. ಭೂಮಾತೆಯ ರೀತಿ ಸಹನಾಮೂರ್ತಿ ಅಗಿರುತ್ತಾನೆ ಪ್ರಜೆಗಳ ಒಳಿತಿಗೆ ಶ್ರಮಿಸುತ್ತಾನೆ. ಪ್ರಜೆಗಳೂ ಕೂಡಾ ಪೃತು ಚಕ್ರವರ್ತಿ ರಾಜ ಎಂದು ಪೂಜಿಸುತ್ತಾರೆ. ಆದರೆ ಅಡಳಿತ ಶುರುವಾದ ನಂತರ ಮಳೆ, ಬೆಳೆಗಳಿಲ್ಲದೇ ಕ್ಷಾಮ ಉಂಟಾಗುತ್ತದೆ. ಪ್ರಜೆಗಳೆಲ್ಲವೂ ಕಂಗಾಲಾಗುತ್ತಾರೆ.
ಆಗ ಪೃತು ಚಕ್ರವರ್ತಿ ಭೂಮಿಯ ಮೇಲಿನ ಕೋಪದಿಂದ ಭೂಮಿಯನ್ನೇ ನಿಗ್ರಹಿಸಲು ಹೊರಡುತ್ತಾನೆ. ಭೂಮಾತೆ ಭಯಪಟ್ಟು ಹೆದರಿ ಓಡುತ್ತಾಳೆ. ಭೂಲೋಕ, ಸ್ವರ್ಗಲೋಕದಲ್ಲಿ ಆಕೆಗೆ ರಕ್ಷಣೆ ಸಿಗುವುದಿಲ್ಲ. ಕೊನೆಗೆ ಪೃತುವಿನ ಬಳಿ ಪ್ರಾರ್ಥಿಸುತ್ತಾಳೆ. ಈ ಬರಗಾಲಕ್ಕೆ ಕಾರಣ ನಿನ್ನ ತಂದೆ ವ್ಯಯನ ಕಾರಣ. ಅವನ ಆಡಳಿತ ಕಾಲದಲ್ಲಿ ಸರಿಯಾಗಿ ಯಜ್ಞ ಯಾಗಾದಿಗಳು ನಡೆಯಲಿಲ್ಲ. ನನಗೆ ಅಹುತಿ ಸಿಗಲಿಲ್ಲ. ಹಾಗಾಗಿ ಬರಗಾಲ ಉಂಟಾಗಿದೆ ಎನ್ನುತ್ತಾಳೆ. ಅಗ ಪೃತು ಮಹಾರಾಜ ಧರ್ಮವನ್ನು ಪುನರ್ ಸ್ಥಾಪನೆ ಮಾಡುತ್ತಾನೆ. ಆಗ ಭೂತಾಯಿ ಸಂಪನ್ನನಾಗುತ್ತಾಳೆ.