Udupi Krishna Mutt: ಜ. 18ರಂದು ನಡೆವ ಪರ್ಯಾಯ ಮಹೋತ್ಸವಕ್ಕೆ ಸಿದ್ಧತೆ ಆರಂಭ
ಜನವರಿ 18ರಂದು ನಡೆವ ಉಡುಪಿ ಕೃಷ್ಣ ಮಠದ ಪರ್ಯಾಯ ಮಹೋತ್ಸವಕ್ಕೆ ಪೂರ್ವ ತಯಾರಿಗಳು ಶುರುವಾಗಿದ್ದು, ಶನಿವಾರ ಭತ್ತ ಮುಹೂರ್ತ ಕಾರ್ಯಕ್ರಮ ವೈಭವಯುತವಾಗಿ ನಡೆದಿದೆ.
ಉಡುಪಿಯ ಕೃಷ್ಣ ದೇವರ ಪೂಜಾಧಿಕಾರ ಹಸ್ತಾಂತರ ಪ್ರಕ್ರಿಯೆಯಾದ ಪರ್ಯಾಯ ಮಹೋತ್ಸವ ಜನವರಿ 18ರಂದು ನಡೆಯಲಿದೆ. ಈ ಬಾರಿ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರಿಗೆ ಪೂಜಾಧಿಕಾರ ಹಸ್ತಾಂತರವಾಗಲಿದೆ. ಈ ಆಚರಣೆಯ ಸಿದ್ಧತೆಗಳು ಈಗಾಗಲೇ ಆರಂಭವಾಗಿದ್ದು, ಶನಿವಾರ ಭತ್ತ ಮುಹೂರ್ತ ರಥಬೀದಿಯಲ್ಲಿ ವೈಭವದಿಂದ ಜರುಗಿದೆ.
Mercury Transit: ಬುಧನ ರಾಶಿ ಪರಿವರ್ತನೆಯಿಂದ ಐದು ರಾಶಿಯವರಿಗೆ ಬಂಪರ್!
ಕೃಷ್ಣಾಪುರ ಮಠದ ಶಿಷ್ಯವರ್ಗದವರು ಕೃಷ್ಣನಿಗೆ ಮುಖ್ಯಪ್ರಾಣ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಸಿದರು. ಬಳಿಕ ಚಂದ್ರೇಶ್ವರ, ಅನಂತೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಕೈಗೊಂಡರು. 800 ವರ್ಷಗಳಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ಈ ಪರ್ಯಾಯ ಮಹೋತ್ಸವ ಅಡೆತಡೆಯಿಲ್ಲದೆ ಮಾದರಿಯಾಗಿ ನಡೆದು ಬಂದಿರುವುದು ವಿಶೇಷ.