ಗೋಪಿ ಚಂದನ ಗಣೇಶನಿಗೆ ಭಾರೀ ಡಿಮ್ಯಾಂಡ್.. ಏನ್ ಸ್ಪೆಶಲ್?
* ಗೋಪಿ ಚಂದನ ಗಣೇಶನಿಗೆ ಭಾರೀ ಡಿಮ್ಯಾಂಡ್!
* ಫೋನ್‌ನಲ್ಲೇ ಬುಕ್ ಆಗುತ್ತಿವೆ ಗಣೇಶನ ಮೂರ್ತಿಗಳು!
* ಮಥುರಾದಿಂದ ತಂದ ಗೋಪಿ ಚಂದನದಿಂದ ಗಣೇಶನ ಮೂರ್ತಿ
* ಅರ್ಧ ಕೆಜಿಯಿಂದ 5 ಕೆಜಿ ತೂಕದ 3 ಮಾದರಿಯ ಗಣೇಶ ಮೂರ್ತಿಗಳು
* ಪರಿಸರ ಸ್ನೇಹಿ, ಮನೆಯಲ್ಲೇ ಬಕೆಟ್‌ನಲ್ಲೇ ವಿಸರ್ಜಿಸಬಹುದಾದ ಮೂರ್ತಿ
ರಾಯಚೂರು(ಸೆ. 05) ಕೊರೋನಾ ಹಿನ್ನೆಲೆಯಲ್ಲಿ ಈ ವರ್ಷ ಗಣೇಶ ಹಬ್ಬವನ್ನು ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆ ಮಾಡುವುದಕ್ಕೆ ಸರ್ಕಾರ ಬ್ರೇಕ್ ಹಾಕುವ ಸಾಧ್ಯತೆ ಇದ್ದು ನಿಯಮಗಳು ಹೊರಬಂದಿಲ್ಲ. ಮನೆ ಹಾಗೂ ದೇವಾಲಯದಲ್ಲಿ ಗಣೇಶ ಪ್ರತಿಷ್ಠಾನ ಮಾಡಲು ಅವಕಾಶ ಎಂದಿದೆ. ಆದ್ರೆ ಗಣೇಶನ ಗಾಗಿ ಜನರು ಈ ವರ್ಷ ಗೋಪಿ ಚಂದನ ಗಣೇಶ ಮೂರ್ತಿಗಳ ಕಡೆ ಮುಖ ಮಾಡಿದ್ದಾರೆ
ಶ್ರೀ ಕೃಷ್ಣನಿಗೆ ಪ್ರಿಯವಾದ ಗೋಪಿ ಚಂದನ ತಿಲಕ ಇಟ್ಟುಕೊಳ್ಳುವುದು ನೋಡಿದ್ದೇವೆ. ಇಲ್ಲ ಗೋಪಿ ಚಂದನದಿಂದ ದೇವರಿಗೆ ಅಭಿಷೇಕ ಮಾಡುವುದು ಕಂಡಿದ್ದೇವೆ. ಆದ್ರೆ ಈಗ ಇದೇ ಗೋಪಿ ಚಂದನದಿಂದ ಗಣೇಶನ ಮೂರ್ತಿ ತಯಾರು ಆಗುತ್ತಿವೆ. ಎಲ್ಲಿ ಅಂತೀರಾ ಈ ವರದಿ ನೋಡಿ.
ಗಣೇಶ ವಿಗ್ರಹದ ಅಳತೆಗೂ, ಕೊರೋನಾಕ್ಕೂ ಏನ್ ಸಂಬಂಧ? ತಯಾರಕರ ಗೋಳು
ಗೋಪಿ ಚಂದನ- ಇದು ಉತ್ತರ ಪ್ರದೇಶದ ಮಥುರಾದಲ್ಲಿ ಕಲ್ಲಿನ ರೂಪದಲ್ಲಿ ಸಿಗುವ ಅತೀ ಪವಿತ್ರ ವಸ್ತು. ನಿತ್ಯವೂ ಬ್ರಾಹ್ಮಣರು ಗೋಪಿ ಚಂದನ ಬಳಕೆ ಮಾಡುತ್ತಾರೆ. ಸಾಮಾನ್ಯವಾಗಿ ಗೋಪಿ ಚಂದನವನ್ನು ಅಭಿಷೇಕಕ್ಕೆ ಬಳಸುವರು. ಗೋಪಿ ಚಂದನ ಧಾರಣೆಯಿಂದ ನೆಮ್ಮದಿ, ಶಾಂತಿ ದೊರೆಯುತ್ತದೆ ಎಂಬ ನಂಬಿಕೆ ಇದೆ. ತಲೆನೋವು, ತಲೆಭಾರ, ರಕ್ತದೊತ್ತಡ ಇತರೆ ತೊಂದರೆ ಆದಾಗಲ್ಲೂ ಸಹ ಇದು ಬಳಕೆ ಮಾಡುತ್ತಾರೆ.