ಗಣೇಶ ವಿಗ್ರಹದ ಅಳತೆಗೂ, ಕೊರೋನಾಕ್ಕೂ ಏನ್ ಸಂಬಂಧ? ತಯಾರಕರ ಗೋಳು

* ಮುದ್ರಣ ಕಾಶಿ ಗದಗದಲ್ಲಿ ಗಣೇಶನ ಮೂರ್ತಿ ತಯಾರಕರು ಕಂಗಾಲು
* ಲಕ್ಷಾಂತರ ರೂಪಾಯಿ ಸಾಲ ಮಾಡಿ ಮೋದಕ ಪ್ರಿಯನ ಮೂರ್ತಿ ನಿರ್ಮಾಣ
* ಮೀನಮೇಷ ಎಣಿಸುತ್ತಿರುವ ಸರ್ಕಾರ, ಗೊಂದಲದಲ್ಲಿ ಶ್ರೀಸಾಮಾನ್ಯ
* ಸರ್ಕಾರದ  ಮಾರ್ಗಸೂಚಿಗೆ ಕಾಯುತ್ತಿರುವ ಕಲಾವಿದರು 
* ಕಂಗಾಲಾಗಿರುವ ಹೂ, ಹಣ್ಣು, ಅಲಂಕಾರಿಕ ವಸ್ತುಗಳ ಮಾರಾಟಗಾರರು 

First Published Sep 4, 2021, 10:44 PM IST | Last Updated Sep 4, 2021, 10:46 PM IST

ಗದಗ(ಸೆ. 04) ಹೆಮ್ಮಾರಿ ಕೊರೊನಾ ಹೊಡೆತಕ್ಕೆ ಹಬ್ಬ ಹರಿದಿನಗಳೆಲ್ಲಾ ಮಂಕಾಗಿ ಹೋಗಿವೆ.. ವಿಘ್ನಗಳ ನಿವಾರಕನಿಗೂ ಕೊರೋನಾದ ವಿಘ್ನಗಳು ಎದುರಾಗಿವೆ. ಖುಷಿ ಖುಷಿಯಿಂದ ಹಬ್ಬಗಳನ್ನು ಆಚರಿಸಬೇಕಿದ್ದ ಜನರಿಗೆ ಸರ್ಕಾರದ ಕಟ್ಟುಪಾಡುಗಳು ಕಟ್ಟಿಹಾಕುವಂತಿವೆ.. ಗಣೇಶ ಮೂರ್ತಿ ತಯಾರಕರ ಬದಕು ಮೂರಾಬಟ್ಟೆಯಾಗಿದೆ. ವಿಘ್ನೇಶ್ವರನಿಗೂ ವಿಘ್ನಗಳ ಕುರಿತು ಗದಗನ ಒಂದು ವರದಿ ಇಲ್ಲಿದೆ ನೋಡಿ..

ನಾವು ಗಣೇಶ ಹಬ್ಬ ಮಾಡೇ ಮಾಡ್ತೇವೆ ಎಂದ ಈಶ್ವರಪ್ಪ

ಸರ್ಕಾರ ಗಣೇಶ ಹಬ್ಬ ಆಚರಣೆಗೆ ಸಂಬಂಧಿಸಿ ಇನ್ನೂ ಸ್ಪಷ್ಟ ನಿರ್ಧಾರ ನೀಡಿಲ್ಲ. ಗಣೇಶ ವಿಗ್ರಹ ಇಂತಿಷ್ಟೆ ಅಡಿ ಇರಬೇಕು ಎಂದು ಸರ್ಕಾರ ಹೇಳುತ್ತಿದೆ. ಈಗಾಗಲೇ ಐದು ಅಡಿ ಗಣಪತಿ ಸಿದ್ಧ ಮಾಡಲಾಗಿದೆ. ಗಣೇಶ ವಿಗ್ರಹ ನಿರ್ಮಾಣವನ್ನೇ ನಮ್ಮ ಜೀವನವನ್ನಾಗಿಸಿಕೊಂಡಿದ್ದೇವೆ.  ನಿರ್ಬಂಧ ಹಾಕುವ ವೇಳೆ  ಇದನ್ನು ಗಮನಕ್ಕೆ ತೆಗೆದುಕೊಳ್ಳಿ ಎಂದು ಗಣೇಶ ತಯಾರಿಕರು ಮನವಿ ಮಾಡಿಕೊಂಡಿದ್ದಾರೆ.