ಮಗನ ನೆರಳು ವ್ಯಾಸರ ಜೊತೆ ಸದಾ ಇರಲು ಶಿವನ ವರವೇ ಕಾರಣ..!
ವ್ಯಾಸ ಮಹರ್ಷಿ ಪುತ್ರ ಶೋಕ ಸಹಿಸಲಾಗದೇ, ಬೆಟ್ಟಗಳೇ ನಡುಗಿ ಹೋಗುವಂತೆ ಪುತ್ರ..ಪುತ್ರ.. ಎಂದು ಕೂಗುತ್ತಾರೆ. ವ್ಯಾಸರ ಶೋಕವನ್ನು ನೋಡಿ, ಶಿವನು ಪ್ರತ್ಯಕ್ಷನಾಗುತ್ತಾನೆ.
ವ್ಯಾಸ ಮಹರ್ಷಿ ಪುತ್ರ ಶೋಕ ಸಹಿಸಲಾಗದೇ, ಬೆಟ್ಟಗಳೇ ನಡುಗಿ ಹೋಗುವಂತೆ ಪುತ್ರ..ಪುತ್ರ.. ಎಂದು ಕೂಗುತ್ತಾರೆ. ವ್ಯಾಸರ ಶೋಕವನ್ನು ನೋಡಿ, ಶಿವನು ಪ್ರತ್ಯಕ್ಷನಾಗುತ್ತಾನೆ. ಓ, ಮಹರ್ಷಿ ದುಃಖಪಡಬೇಡ. ನಿನ್ನ ಮಗನ ನೆರಳು ನಿನ್ನ ಪಕ್ಕದಲ್ಲಿಯೇ ಇರುತ್ತದೆ. ಅದನ್ನು ನೋಡಿ ಸಂತೋಷಪಡು ಎಂದು ವರಕೊಟ್ಟು ಅದೃಶ್ಯನಾಗುತ್ತಾನೆ. ಹಾಗಾಗಿ ವ್ಯಾಸರ ಜೊತೆ ಮಗನ ನೆರಳು ಸದಾ ಇರುತ್ತದೆ. ಮುಂದೆ ವ್ಯಾಸರು ಶಿಷ್ಯರಿಗೆ ವಿದ್ಯಾದಾನ ಮಾಡುತ್ತಾರೆ.