Mahashivaratri Shopping: ಹಬ್ಬದ ದಿನ ಮಾರ್ಕೆಟ್‌ನಲ್ಲಿ ಜನಜಂಗುಳಿ, ಬೆಲೆ ಏರಿಕೆಗೆ ಭಯ ಪಡದ ಭಕ್ತರು
ಶಿವರಾತ್ರಿ ಹಬ್ಬದ ಪ್ರಯುಕ್ತ ಹೂವು, ಹಣ್ಣು, ತರಕಾರಿಗಳ ಬೆಲೆ ಗಗನಕ್ಕೇರಿದೆ. ಆದರೆ, ಜನ ಅದ್ಯಾವುದಕ್ಕೂ ಕ್ಯಾರೇ ಎನ್ನದೆ ಹಬ್ಬದ ಸಂಭ್ರಮ ಹೆಚ್ಚಿಸಿಕೊಳ್ಳಲು ಪೂಜೆ ಸಾಮಗ್ರಿಗಳ ಖರೀದಿಗಾಗಿ ಮಾರ್ಕೆಟ್‌ಗಳಿಗೆ ಮುಗಿ ಬಿದ್ದಿದ್ದಾರೆ.
ಶಿವರಾತ್ರಿ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ ತಟ್ಟಿದ್ದರೂ ಭಕ್ತರು ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಬೆಳ್ಳಂಬೆಳಗ್ಗೆ ಕೆ. ಆರ್ . ಮಾರ್ಕೆಟ್(K.R. Market)ನಲ್ಲಿ ಜಂಗುಳಿಯಲ್ಲಿ ಸೇರಿ ಖರೀದಿಗೆ ಮುಗಿ ಬಿದ್ದಿದ್ದಾರೆ. ಎಲ್ಲ ಹೂವುಗಳೂ ಕೆಜಿಗೆ 200 ರೂ. ಮೇಲೆಯೇ ಇದ್ದರೂ ಜನ ಹೆದರದೆ, ಬೆಲೆಗಿಂತ ಶಿವಭಕ್ತಿಯೇ ಹೆಚ್ಚು ಎಂದು ತೋರಿಸುತ್ತಿದ್ದಾರೆ.
Mahashivaratri Significance: ಮಹಾಶಿವರಾತ್ರಿಯ ಪ್ರಾಮುಖ್ಯತೆ ಏನು? ಗುರುಗಳೇನಂತಾರೆ?
ಹೂವು, ಹಣ್ಣು, ತರಕಾರಿಗಳ ಖರೀದಿಯಲ್ಲಿ ನಿರತರಾಗಿರುವ ಜನರು ಸಾಮಾಜಿಕ ಅಂತರ, ಕೋವಿಡ್ ಸಮಸ್ಯೆಯನ್ನೆಲ್ಲ ಸಂಪೂರ್ಣ ಮರೆತೇ ಬಿಟ್ಟಿದ್ದಾರೆ. ಈ ಬಗ್ಗೆ ವಿಡಿಯೋ ವರದಿ ಇಲ್ಲಿದೆ.