Rama Navami 2022: ತುಮಕೂರಿನಲ್ಲಿ ಕಾಂಗ್ರೆಸ್‌ನಿಂದ ಅದ್ದೂರಿ ರಾಮನವಮಿ ಆಚರಣೆ
ರಾಜ್ಯದಲ್ಲಿಂದು ಶ್ರೀರಾಮ ನವಮಿ ಸಂಭ್ರಮ ಜೋರಾಗಿದೆ. ರಾಮ ನವಮಿ ಹಿನ್ನೆಲೆ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಸರಿ ಶಲ್ಯ ತೊಟ್ಟು ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತ ಸಾರ್ವಜನಿಕರಿಗೆ ಪಾನಕ, ಮಜ್ಜಿಗೆ ವಿತರಿಸುತ್ತಿದ್ದಾರೆ.
ತುಮಕೂರು (ಏ.10): ರಾಜ್ಯದಲ್ಲಿಂದು ಶ್ರೀರಾಮ ನವಮಿ (Rama Navami) ಸಂಭ್ರಮ ಜೋರಾಗಿದೆ. ರಾಮ ನವಮಿ ಹಿನ್ನೆಲೆ ಯುವ ಕಾಂಗ್ರೆಸ್ ಕಾರ್ಯಕರ್ತರು (Congress Workers) ಕೇಸರಿ ಶಲ್ಯ ತೊಟ್ಟು ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತ ಸಾರ್ವಜನಿಕರಿಗೆ ಪಾನಕ, ಮಜ್ಜಿಗೆ ವಿತರಿಸುತ್ತಿದ್ದಾರೆ. ತುಮಕೂರಿನ (Tumkur) ಭದ್ರಮ್ಮ ಸರ್ಕಲ್‌ನಲ್ಲೂ ಇದೇ ರೀತಿಯ ದೃಶ್ಯಗಳು ಕಂಡು ಬಂದಿವೆ. ಧರ್ಮಗಳನ್ನು ಮರೆತು ಹಿಂದೂ ಮುಸ್ಲಿಮರು ಪಾನಕ, ಮಜ್ಜಿಗೆ ನೀಡಿ ಸಂಭ್ರಮಿಸುತ್ತಿರುವ ದೃಶ್ಯಗಳು ಕಂಡು ಬಂದಿವೆ.
ಶ್ರೀರಾಮಸೇನೆ ಕಾರ್ಯಕರ್ತರಿಂದ ದೇವಸ್ಥಾನದ ಬಳಿಯಿದ್ದ ಮುಸ್ಲಿಂ ಅಂಗಡಿಗಳು ಧ್ವಂಸ
ಇದೇ ವೇಳೆ ಮುಸ್ಲಿಂ ಯುವಕರೂ ಸಹ ಅವರೊಂದಿಗೆ ಕೈ ಜೋಡಿಸಿದ್ದಾರೆ. ಹಿಂದೂ ಮುಸ್ಲಿಂ ಕಾಂಗ್ರೆಸ್ ಕಾರ್ಯಕರ್ತರಿಂದ ಶ್ರೀರಾಮನವಮಿ ಆಚರಣೆ ಮಾಡಲಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು ಕೇಸರಿ ಶಲ್ಯ ತೊಟ್ಟರೆ ಮುಸ್ಲಿಮರು ಟೋಪಿ ಧರಿಸಿ ಶ್ರೀರಾಮ ನವಮಿ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಸಾರ್ವಜನಿಕರಿಗೆ ಪಾನಕ ಹಂಚಿ ಸಂಭ್ರಮಿಸುತ್ತಿದ್ದಾರೆ.