Yadagir: ಹಿಂದೂಗಳಿಗೆ ಮೌನೇಶ್ವರ, ಮುಸ್ಲಿಮರಿಗೆ ಮೌನುದ್ಧಿನ್; ಐಕ್ಯತೆಯ ಕ್ಷೇತ್ರ ತಿಂಥಣಿ
ರಾಜ್ಯದಲ್ಲಿ ಹಿಜಾಬ್-ಕೇಸರಿ ಶಾಲಿನ ಸಂಘರ್ಷ ವಿವಾದ ಭುಗಿಲೆದ್ದಿದೆ. ಆದ್ರೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿಯಲ್ಲಿ ಭಾವೈಕ್ಯತೆಯ ಭಾವ ತುಂಬಿದೆ. ಹಿಂದೂ-ಮುಸ್ಲಿಂ ಜನಾಂಗದವರೆಲ್ಲಾ ಐಕ್ಯತೆ ಸಾರುವ ಪುಣ್ಯ ಕ್ಷೇತ್ರ ಈ ದಕ್ಷಿಣ ಕಾಶಿ ಎಂದೇ ಪ್ರಖ್ಯಾತ ಹೊಂದಿರುವ ತಿಂಥಣಿ ಮೌನೇಶ್ವರ ದೇವಾಲಯ.
ಯಾದಗಿರಿ (ಫೆ. 19): ರಾಜ್ಯದಲ್ಲಿ ಹಿಜಾಬ್-ಕೇಸರಿ ಶಾಲಿನ ಸಂಘರ್ಷ ವಿವಾದ ಭುಗಿಲೆದ್ದಿದೆ. ಆದ್ರೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿಯಲ್ಲಿ ಭಾವೈಕ್ಯತೆಯ ಭಾವ ತುಂಬಿದೆ. ಹಿಂದೂ-ಮುಸ್ಲಿಂ ಜನಾಂಗದವರೆಲ್ಲಾ ಐಕ್ಯತೆ ಸಾರುವ ಪುಣ್ಯ ಕ್ಷೇತ್ರ ಈ ದಕ್ಷಿಣ ಕಾಶಿ ಎಂದೇ ಪ್ರಖ್ಯಾತ ಹೊಂದಿರುವ ತಿಂಥಣಿ ಮೌನೇಶ್ವರ ದೇವಾಲಯ.
Hijab Row: ಭಾರತೀಯ ಮುಸ್ಲಿಂ ಹೇಗಿರಬೇಕು..? ಮುಸಲ್ಮಾನ ನಾಯಕರು ಹೀಗೆ ಹೇಳ್ತಾರೆ
ಕರ್ನಾಟಕದಲ್ಲಿಯೇ ಪ್ರಸಿದ್ಧವಾಗಿರುವ ತಿಂಥಣಿ ಮೌನೇಶ್ವರ ಹಿಂದೂ-ಮುಸ್ಲಿಮರ ಆರಾಧ್ಯ ಧೈವ. ಹಿಂದೂಗಳು ಮೌನೇಶ್ವರ ಎಂದು ಪೂಜಿಸಿದ್ರೆ, ಮಸಲ್ಮಾನರು ಮೌನುದ್ಧಿನ್ ಎಂದು ಆರಾಧಿಸುತ್ತಾರೆ. ಎರಡು ಧರ್ಮದವರು ಜನರು ಅದ್ದೂರಿಯಿಂದ ಆಚರಿಸುವ ಜಾತ್ರೆ ಈ ಮೌನೇಶ್ವರ ಜಾತ್ರೆ. ಕೃಷ್ಣಾ ನದಿ ತೀರದಲ್ಲಿರುವ ತಿಂಥಣಿ ಮೌನೇಶ್ವರ ದೇವಾಲಯ ಅಪಾರ ಭಕ್ತರನ್ನು ಹೊಂದಿದೆ.
ತಿಂಥಣಿ ಮೌನೇಶ್ವರ ಕ್ಷೇತ್ರದಲ್ಲಿ ಕೈಲಾಸ ಕಟ್ಟೆ ವಿಶೇಷತೆಯನ್ನು ಹೊಂದಿದೆ. ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಸೇರಿದಂತೆ ಬೇರೆ ಬೇರೆ ರಾಜ್ಯದ ನೂರಾರು ಸಾಧು-ಸಂತರ ಈ ಕೈಲಾಸ ಕಟ್ಟೆಗೆ ಬಂದು ಗಾಂಜಾ ಸೇವನೆ ಮಾಡುತ್ತಾರೆ. ಮೌನೇಶ್ವರನ ಭಕ್ತರು ಸಾಧು-ಸಂತರಿಗೆ ಗಾಂಜಾ, ಅನ್ನ ಸಂತರ್ಪಣೆ ಮಾಡಿ ಭಕ್ತಿಯನ್ನು ಮೆರೆಯುತ್ತಾರೆ. ಐದು ದಿನಗಳ ಕಾಲ ನಡೆಯುವ ಈ ಜಾತ್ರೆ ಸಾಧು-ಸಂತರ ತವರೂರು ಇದ್ದಂತೆ. ಗಾಂಜಾ ನಶೆಯಲ್ಲಿ ತೆಲಾಡುವ ಸಾಧು-ಸಂತರು,ಗಾಂಜಾ ಸೇವನೆಯಿಂದ ಕೈಲಾಸ ಕಾಣುತ್ತಾರಂತೆ.
ರಾಜ್ಯದಲ್ಲೆಡೆ ಹಿಜಾಬ್-ಕೇಸರಿ ಶಾಲಿನ ಗಲಾಟೆ, ಗದ್ದಲ ನಡೆಯುತ್ತಿದ್ರೆ ಯಾದಗಿರಿಯ ಈ ಪುಣ್ಯಕ್ಷೇತ್ರದಲ್ಲಿ ಸಾಮರಸ್ಯ, ಸಹೋದರತೆ, ಐಕ್ಯತೆ, ಭಾವೈಕತೆಯಿಂದ ಮೌನೇಶ್ವರ ಜಾತ್ರೆ ಆಚರಿಸುತ್ತಿದ್ದಾರೆ. ಇದು ರಾಜ್ಯದ ಎಲ್ಲರಿಗೂ ಮಾದರಿಯಾದ ವಿಶೇಷ ಜಾತ್ರೆಯಾಗಿದೆ.