Asianet Suvarna News Asianet Suvarna News

ಇಂದಿನಿಂದ ಸುವರ್ಣ ಶಿಕ್ಷಣ ಎಕ್ಸ್‌ಫೋ, ತಜ್ಞರಿಂದ ವಿದ್ಯಾರ್ಥಿಗಳಿಗೆ ಸಿಗಲಿದೆ ಪಕ್ಕಾ ಮಾಹಿತಿ

Sep 25, 2021, 10:49 AM IST

ಬೆಂಗಳೂರು (ಸೆ. 25): ‘ಕನ್ನಡಪ್ರಭ’ ಮತ್ತು ‘ಏಷ್ಯಾನೆಟ್‌ ಸುವರ್ಣ ನ್ಯೂಸ್‌’ ಸಹಭಾಗಿತ್ವದಲ್ಲಿ ಇಂದಿನಿಂದ ಪ್ರಾರಂಭವಾಗುವ ಎರಡು ದಿನಗಳ ಕಾಲದ ‘ಸುವರ್ಣ ಶಿಕ್ಷಣ’ ಎಜುಕೇಷನ್‌ನ ಮೆಗಾ ಎಕ್ಸ್‌ಫೋಗೆ ತಾಂತ್ರಿಕ ಶಿಕ್ಷಣ ಸಚಿವ ಡಾ ಸಿ.ಎನ್‌.ಅಶ್ವತ್ಥ ನಾರಾಯಣ ಚಾಲನೆ ನೀಡಲಿದ್ದಾರೆ.

ಸುವರ್ಭ ನ್ಯೂಸ್ - ಕನ್ನಡ ಪ್ರಭ ಸಹಯೋಗದಲ್ಲಿ ಆಯೋಜನೆ: ಕೋವಿಡ್ ಫ್ರೀ ಕ್ಯಾಂಪಸ್‌ಗೆ ಮೆಚ್ಚುಗೆ

ಸೆಪ್ಟಂಬರ್‌ 25 ಮತ್ತು 26 ರಂದು ಮಲ್ಲೇಶ್ವರದಲ್ಲಿರುವ ಮಾರ್ಗೋಸಾ ರಸ್ತೆಯ ಶಾಲಾ ಮೈದಾನದಲ್ಲಿ ನಡೆಯುವ ಎಕ್ಸ್‌ಪೋದಲ್ಲಿ ಚಿತ್ರ ನಟ ಗೋಲ್ಡ್‌ನ ಸ್ಟಾರ್‌ ಗಣೇಶ್‌ ಮತ್ತು ಕನ್ನಡ ಪ್ರಭ ಪ್ರಧಾನ ಸಂಪಾದಕರಾದ ರವಿ ಹೆಗಡೆ ಭಾಗಿಯಾಗಲಿದ್ದಾರೆ. ಜೊತೆಗೆ, ಶಿಕ್ಷಣ ಕ್ಷೇತ್ರದ ಹಲವು ತಜ್ಞರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. ಎಕ್ಸ್‌ಫೋದಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಮಾತ್ರವಲ್ಲದೆ ಹೊರ ಜಿಲ್ಲೆಗಳ ವಿಶ್ವವಿದ್ಯಾಲಯಗಳು ಸೇರಿದಂತೆ ಸುಮಾರು 36ಕ್ಕೂ ಹೆಚ್ಚು ಕಾಲೇಜುಗಳು ಭಾಗಿಯಾಗುತ್ತಿವೆ. ಪಿಯುಸಿ ಮತ್ತು ಸಿಇಟಿ ಫಲಿತಾಂಶದ ನಂತರ ಯಾವ ಕೋರ್ಸ್‌ಗೆ ಸೇರಬೇಕು ಎಂದು ಗೊಂದಲದಲ್ಲಿರುವ ವಿದ್ಯಾರ್ಥಿಗಳಿಗೆ ಪರಿಹಾರವನ್ನು ಕಲ್ಪಿಸಲಿದ್ದಾರೆ.