ಇದು ನನ್ನ 6 ನೇ ಪ್ರಯತ್ನ, ರಾಜ್'ಕುಮಾರ್ ಅಕಾಡೆಮಿ ತುಂಬಾ ಸಪೋರ್ಟಿವ್ ಆಗಿತ್ತು: UPSC ಟಾಪರ್ ರಘುನಂದನ್
ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸಿದ 2021ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಆಯ್ಕೆಯಾದ 685 ಅಭ್ಯರ್ಥಿಗಳ ಪೈಕಿ ರಾಜ್ಯದ 32 ಅಭ್ಯರ್ಥಿಗಳು ಇದ್ದಾರೆ. ದಾವಣಗೆರೆ (Davanagere) ಮೂಲದ ಅವಿನಾಶ್ ವಿ. ತಮ್ಮ ಮೊದಲ ಪ್ರಯತ್ನದಲ್ಲೇ ರಾಷ್ಟ್ರೀಯ ಮಟ್ಟದಲ್ಲಿ 31ನೇ ರ್ಯಾಂಕ್ ಪಡೆದಿದ್ದು, ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ.
ಬೆಂಗಳೂರು (ಜೂ. 01): ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸಿದ 2021ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ಆಯ್ಕೆಯಾದ 685 ಅಭ್ಯರ್ಥಿಗಳ ಪೈಕಿ ರಾಜ್ಯದ 32 ಅಭ್ಯರ್ಥಿಗಳು ಇದ್ದಾರೆ. ದಾವಣಗೆರೆ ಮೂಲದ ಅವಿನಾಶ್ ವಿ. ತಮ್ಮ ಮೊದಲ ಪ್ರಯತ್ನದಲ್ಲೇ ರಾಷ್ಟ್ರೀಯ ಮಟ್ಟದಲ್ಲಿ 31ನೇ ರ್ಯಾಂಕ್ ಪಡೆದಿದ್ದು, ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. 455 ನೇ ರ್ಯಾಂಕ್ ಪಡೆದಿರುವ ರವಿನಂದನ್ ಬಿ.ಎಂ ಎನ್ನುವವರು ಶೆಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.
UPSC ಯಲ್ಲಿ 139 ನೇ ರ್ಯಾಂಕ್, ರಾಜ್‌ಕುಮಾರ್ ಅಕಾಡೆಮಿಗೆ ಕ್ರೆಡಿಟ್: ನಿಖಿಲ್ ಬಸವರಾಜ ಪಾಟೀಲ್
'ಇದು ನನ್ನ 6 ನೇ ಪ್ರಯತ್ನ, ನಾವು ಸೋತಾಗ ರಾಜ್‌ಕುಮಾರ್ ಅಕಾಡೆಮಿ ಪ್ರತಿಯೊಬ್ಬ ಸ್ಟಾಫ್ ಸಪೋರ್ಟಿವ್ ಆಗಿ ನಿಂತಿದ್ರು. ಅದು ನಮಗೆ ಎನರ್ಜಿ ನೀಡುತ್ತಿತ್ತು. ನಮ್ಮ ಯಶಸ್ಸಿನ ಕ್ರೆಡಿಟ್ ರಾಜ್‌ಕುಮಾರ್ ಅಕಾಡೆಮಿಗೆ ಸಲ್ಲಬೇಕು' ಎಂದು ರಘುನಂದನ್ ಹೇಳಿದರು.