Hijab Verdict : ಹಿಜಾಬ್ ತೀರ್ಪಿನಿಂದ ಕಾಂಗ್ರೆಸ್ ಗೆ ಮುಖಭಂಗವಾಗಿದೆ ಎಂದ ರೇಣುಕಾಚಾರ್ಯ
ಹೈಕೋರ್ಟ್ ನೀಡಿರುವ ಹಿಜಾಬ್ ತೀರ್ಪಿನಿಂದ ಕಾಂಗ್ರೆಸ್ ಮುಖಂಡರಿಗೆ ಕಪಾಳ ಮೋಕ್ಷ ಮಾಡಿದಂತಾಗಿದೆ ಎಂದು ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.
ಬೆಂಗಳೂರು(ಮಾ.15): ಕರ್ನಾಟಕ ಉಚ್ಚ ನ್ಯಾಯಾಲಯ (Karnataka high court ) ನೀಡಿರುವ ಹಿಜಾಬ್ ತೀರ್ಪು (Hijab Verdict) ಕಾಂಗ್ರೆಸ್ ಮುಖಂಡರಿಗೆ ಕಪಾಳ ಮೋಕ್ಷ ಮಾಡಿದಂತಾಗಿದೆ. ಈಗಾಗಲೇ ಎಸ್ ಸಿ/ ಎಸ್ ಟಿ ಇವರಿಂದ ದೂರ ಆಗಿದ್ದಾರೆ. ಅಂಬೇಡ್ಕರ್ ಅವರನ್ನ ಸೋಲಿಸಿದ್ದು ಇವರೇ ಅಲ್ಲವೇ? ಮುಸ್ಲಿಮರು ಸಹ ಕಾಂಗ್ರೆಸ್‌ನಿಂದ ದೂರ ಆಗ್ತಾರೆ ಎಂದು ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.
ಕುರಾನ್ ಹೇಳಿದ್ದೇ ಫೈನಲ್, ಕೋರ್ಟ್ ತೀರ್ಪು ಪಾಲಿಸಲ್ಲ. ಹಿಜಾಬ್ ಪರ ಮತ್ತೆ ಗುಡುಗಿದ ವಿದ್ಯಾರ್ಥಿನಿಯರು
ಹಲವು ಸಂಘಟನೆಗಳು ಹಿಜಾಬ್ ಮೂಲಭೂತ ಹಕ್ಕು ಎಂದು ಶಾಂತಿ ಕದಡುವ ಕೆಲಸ ಮಾಡಿದ್ದವು. ಅವರನ್ನು ಶಿಕ್ಷಣದಿಂದ ವಂಚಿತರನ್ನಾಗಿಸಿ ಭಯೋತ್ಪಾದಕನ್ನಾಗಿ ಬಳಸಿಕೊಳ್ಳುವ ಯೋಚನೆ ಇತ್ತು. ರಾಜ್ಯ ಸರ್ಕಾರದ ನಿಲುವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಸಮವಸ್ತ್ರ ಕಡ್ಡಾಯ ಎಂದು ಸರ್ಕಾರ ಆದೇಶ ಹೊರಡಿಸಿತ್ತು. ನ್ಯಾಯಾಲಯದ ತೀರ್ಪನ್ನು ನಾನು ಸ್ವಾಗತಿಸುತ್ತೇನೆ ಎಂದಿದ್ದಾರೆ ರೇಣುಕಾಚಾರ್ಯ.