Clarence High School bible issue ಕ್ಲಾರೆನ್ಸ್ ಶಾಲೆಗೆ ನೊಟೀಸ್
ಕ್ಲಾರೆನ್ಸ್ ಶಾಲೆ ಯಲ್ಲಿ ಎದ್ದಿರುವ ಬೈಬಲ್ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಕ್ಲಾರೆನ್ಸ್ ಶಾಲೆ ಬಹಳ ದೊಡ್ಡ ತಪ್ಪು ಮಾಡಿದೆ. ಕರ್ನಾಟಕ ಶಿಕ್ಷಣ ಕಾಯ್ದೆ ಪ್ರಕಾರ ಶಾಲೆ ನಡೆಸಬೇಕು ಎಂದಿದ್ದಾರೆ.
ಬೆಂಗಳೂರು(ಎ.26): ಹಿಜಾಬ್ ವಿವಾದದ ಬೆನ್ನಲ್ಲೇ ಶಿಕ್ಷಣ ಸಂಸ್ಥೆಯಲ್ಲಿ ಎದ್ದಿರುವ ಬೈಬಲ್ (bible ) ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಿಕ್ಷಣ ಸಚಿವ ಬಿ ಸಿ ನಾಗೇಶ್ (BC Nagesh) ಕ್ಲಾರೆನ್ಸ್ ಶಾಲೆ ಬಹಳ ದೊಡ್ಡ ತಪ್ಪು ಮಾಡಿದೆ. ಕರ್ನಾಟಕ ಶಿಕ್ಷಣ ಕಾಯ್ದೆ ಪ್ರಕಾರ ಶಾಲೆ ನಡೆಸಬೇಕು. ಇದು ಗೊತ್ತಿದ್ದರೂ ಮಕ್ಕಳು ಬೈಬಲ್ ಅನ್ನು ತರಬೇಕು, ಹಾಗೂ ಅದರ ಬಗ್ಗೆ ಪರೀಕ್ಷೆ ಗಳು ನಡೆಸುತ್ತೆ ಅಂದ್ರೆ ಬಹಳ ದೊಡ್ಡ ತಪ್ಪು. ಕ್ಲಾರೆನ್ಸ್ ಶಾಲೆ ಆಡಳಿತ ಮಂಡಳಿ ಇನ್ನೂ ನಮಗೆ ಸ್ವಾತಂತ್ರ್ಯ ಬಂದಿಲ್ಲ ಅಂದುಕೊಂಡಿದ್ದಾರೋ ಏನೋ ಅವರಿಗೆ ನಾವು ನೊಟೀಸ್ ನೀಡಿದ್ದೇವೆ ಎಂದಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು Supreme Court
ಸರ್ಕಾರದಿಂದ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದು ಕೊಳ್ತೀವಿ. ಶಾಲೆಗಳಲ್ಲಿ ನೀತಿ ಶಿಕ್ಷಣ ತರಬೇಕು ಎಂಬ ದೃಷ್ಟಿಯಿಂದ ಭಗವದ್ಗೀತೆ ವಿಚಾರ ಬಂದಾಗ ಆಕಾಶ ತಲೆ ಮೇಲೆ ಬಿದ್ದ ಹಾಗೆ ಆಡಿದ್ರು. ಈಗ ಕ್ಲಾರೆನ್ಸ್ ಶಾಲೆ ವಿಚಾರದಲ್ಲಿ ಬುದ್ಧಿಜೀವಿಗಳು ಮೌನವಹಿಸಿದ್ದಾರೆ. ಇದು ಓಟ್ ಬ್ಯಾಂಕ್ ಪಾಲಿಟಿಕ್ಸ್. ಬೇರೆ ಧರ್ಮಗಳ ವಿಚಾರದಲ್ಲಿ ಮೌನ ವಹಿಸಿ, ಹಿಂದೂ ಧರ್ಮದ ವಿಚಾರದಲ್ಲಿ ಮಾತ್ರ ಮಾತನಾಡ್ತಾರೆ ಯಾಕೆ ಅಂದ್ರೆ ಹಿಂದೂ ಧರ್ಮದ ವಿರುದ್ದ ಮಾತಾಡಿದ್ರೆ ಏನೂ ಆಗಲ್ಲ ಎನ್ನುವ ಧೈರ್ಯ ಇವರಿಗೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.