3 ವರ್ಷದ ಹಿಂದೆ ಮುಚ್ಚಲ್ಪಟ್ಟಿದ್ದ ಸರ್ಕಾರಿ ಶಾಲೆ ಓಪನ್; ಶಾಲೆಗೆ ಬರಲು ಮಕ್ಕಳೂ ರೆಡಿ!
ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಈ ಕಾಲದಲ್ಲಿ, 3 ವರ್ಷದ ನಂತರ ಸರ್ಕಾರಿ ಶಾಲೆಯೊಂದು ತೆರೆದಿದೆ. ಶಾಲೆಗೆ ಸೇರಲು 40- 50 ಮಕ್ಕಳು ಸಜ್ಜಾಗಿದ್ದಾರೆ. ಈಗಾಗಲೇ ಇಬ್ಬರು ಶಿಕ್ಷಕರ ನೇಮಕವನ್ನೂ ಮಾಡಲಾಗಿದೆ. ಇಂತದ್ದೊಂದು ಸುಂದರ ಕ್ಷಣಕ್ಕೆ ಸಾಕ್ಷಿಯಾಗಿದ್ದು ಮಡಿಕೇರಿ ತಾಲೂಕಿನ ಮದೇಗ್ರಾಮ.
ಬೆಂಗಳೂರು (ಅ. 02): ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಈ ಕಾಲದಲ್ಲಿ, 3 ವರ್ಷದ ನಂತರ ಸರ್ಕಾರಿ ಶಾಲೆಯೊಂದು ತೆರೆದಿದೆ. ಶಾಲೆಗೆ ಸೇರಲು 40- 50 ಮಕ್ಕಳು ಸಜ್ಜಾಗಿದ್ದಾರೆ. ಈಗಾಗಲೇ ಇಬ್ಬರು ಶಿಕ್ಷಕರ ನೇಮಕವನ್ನೂ ಮಾಡಲಾಗಿದೆ. ಇಂತದ್ದೊಂದು ಸುಂದರ ಕ್ಷಣಕ್ಕೆ ಸಾಕ್ಷಿಯಾಗಿದ್ದು ಮಡಿಕೇರಿ ತಾಲೂಕಿನ ಮದೇಗ್ರಾಮ.
ಶಾಲೆ ಪುನಾರಂಭ ಚಿಂತನೆ; ಶಿಕ್ಷಣ ತಜ್ಞರು, ಶಾಸಕರು, ಸಂಸದರ ಅಭಿಪ್ರಾಯಕ್ಕೆ ಆಹ್ವಾನ
ಇಲ್ಲಿನ ಸರ್ಕಾರಿ ಶಾಲೆ ಪುನಾರಂಭಗೊಂಡಿದೆ. ಕೊರೊನಾ ಹಿನ್ನಲೆಯಲ್ಲಿ ಸಾಕಷ್ಟು ಕುಟುಂಬಗಳಿಗೆ ಹಣಕಾಸಿನ ಸಮಸ್ಯೆ ಕಾಡುತ್ತಿದೆ. ಪ್ರವಾಹ, ಮಳೆಯಿಂದ ಕಷ್ಟದಲ್ಲಿರುವವರಿಗೆ ತಮ್ಮ ಮಕ್ಕಳನ್ನು ಹೊರಗೆ ಕಳುಹಿಸಲು ಸಾಧ್ಯವಾಗದ ಇಂತಹ ಸ್ಥಿತಿಯಲ್ಲಿ ತಮ್ಮ ಊರಿನಲ್ಲಿಯೇ ಶಾಲೆ ಆರಂಭ ಆಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ವಿಚಾರ ಕೇಳೋಕೆ ನಮಗೂ ಖುಷಿಯೇ ಬಿಡಿ!