ಮೆಡಿಕಲ್ ವಿದ್ಯಾರ್ಥಿನಿಯ ಶುಲ್ಕ 70 ಲಕ್ಷ ಗುಳುಂ, ಮಾಜಿ ಅಧ್ಯಕ್ಷ ಅಪ್ಪಾಜಿ ಗೌಡ ವಿರುದ್ಧ FIR
ಮೆಡಿಕಲ್ ವಿದ್ಯಾರ್ಥಿನಿಯಿಂದ ಬರೋಬ್ಬರಿ 70 ಲಕ್ಷ ರೂ ಹಣ ಪಡೆದು ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರು (ಅ. 01): ಮೆಡಿಕಲ್ ವಿದ್ಯಾರ್ಥಿನಿಯಿಂದ ಬರೋಬ್ಬರಿ 70 ಲಕ್ಷ ರೂ ಹಣ ಪಡೆದು ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಹಾನಗಲ್ ಕ್ಷೇತ್ರದ ಬಿಜೆಪಿ ಟಿಕೆಟ್ ಕಸರತ್ತು, ರೇವತಿ ಶಿವಕುಮಾರ್‌ಗೆ ಟಿಕೆಟ್ ಇಲ್ಲ.?
ಕಿಮ್ಸ್‌ನಲ್ಲಿ ಮೆಡಿಕಲ್ ಸೈನ್ಸ್ ಡಿಪ್ಲೋಮಾಗೆ ಸೇರಿದ್ದ ವಿದ್ಯಾರ್ಥಿನಿ ಡಾ. ಮರಿ ಅನುಷಾ ದೀಪ್ತಿ ಎಂಬಾಕೆಯ 2016-17 ನೇ ಶೈಕ್ಷಣಿಕ ಸಾಲಿನ ಶುಲ್ಕವನ್ನು ಗುಳುಂ ಮಾಡಿದ್ದಾರೆ. ಅರ್ಧಹಣ ಕಟ್ಟಿದ್ದ ದೀಪ್ತಿ ಪೋಷಕರಿಗೆ 2018, ಅ. 26 ಕ್ಕೆ ನೋಟಿಸ್ ಬರುತ್ತದೆ. ಬಳಿಕ ಬಾಕಿ ಹಣವನ್ನು ಹೊಂದಿಸಿ ಪೋಷಕರು ಕಟ್ಟುತ್ತಾರೆ. ಆಗಿನ ಅಧ್ಯಕ್ಷ ಅಪ್ಪಾಜಿ ಗೌಡ ಹಾಗೂ ಮತ್ತಿಬ್ಬರಿಗೆ ಹಣ ಕಟ್ಟಿದ್ದರು. ಆದರೆ ಅವರು ಆ ಹಣವನ್ನು ಸ್ವಂತಕ್ಕೆ ಉಪಯೋಗಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಾಜಿ ಅಧ್ಯಕ್ಷ ಅಪ್ಪಾಜಿ ಗೌಡ ವಿರುದ್ಧ ಎಫ್‌ಆರ್ ದಾಖಲಾಗಿದೆ.