Hijab Row: ವಾಗ್ವಾದ, ವಿರೋಧ, ಮನವೊಲಿಕೆ, ಶಾಲೆ ಪುನಾರಂಭದ ಮೊದಲ ದಿನದ ದೃಶ್ಯ
ಹಿಜಾಬ್ ಗದ್ದಲದ ನಡುವೆಯೇ ರಾಜ್ಯಾದ್ಯಂತ ಸೋಮವಾರ (ಫೆ. 14) ರಿಂದ 9 ಮತ್ತು 10ನೇ ತರಗತಿಗಳು ಬಿಗಿಬಂದೋಬಸ್ತ್ ನಡುವೆ ಆರಂಭವಾಗಿವೆ. ಕೆಲ ಸಣ್ಣಪುಟ್ಟ ವಾಗ್ವಾದ, ವಿರೋಧದ ಹೊರತಾಗಿ ಬಹುತೇಕ ಕಡೆ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರ ಧರಿಸಿಕೊಂಡೇ ತರಗತಿಗೆ ಹಾಜರಾದರು.
ಬೆಂಗಳೂರು (ಫೆ. 15): ಹಿಜಾಬ್ ಗದ್ದಲದ ನಡುವೆಯೇ ರಾಜ್ಯಾದ್ಯಂತ ಸೋಮವಾರ (ಫೆ. 14) ರಿಂದ 9 ಮತ್ತು 10ನೇ ತರಗತಿಗಳು ಬಿಗಿಬಂದೋಬಸ್ತ್ ನಡುವೆ ಆರಂಭವಾಗಿವೆ. ಕೆಲ ಸಣ್ಣಪುಟ್ಟ ವಾಗ್ವಾದ, ವಿರೋಧದ ಹೊರತಾಗಿ ಬಹುತೇಕ ಕಡೆ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರ ಧರಿಸಿಕೊಂಡೇ ತರಗತಿಗೆ ಹಾಜರಾದರು.
Hijab Row: ಒತ್ತಡಕ್ಕೆ ಮಣಿದರೆ ಮುಂದೊಂದು ದಿನ ದೇಶ ತುಂಡು ಮಾಡ್ತಾರೆ: ಪ್ರತಾಪ್ ಸಿಂಹ
ವಿವಾದದ ಕಿಡಿ ಹೊತ್ತಿಕೊಂಡ ಉಡುಪಿ ಹಾಗೂ ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಗದಗ, ಬಳ್ಳಾರಿ, ರಾಮನಗರ, ವಿಜಯನಗರ, ಚಿಕ್ಕಮಗಳೂರು ಸೇರಿ ಬಹುತೇಕ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳು ಯಾವುದೇ ಗೊಂದಲ, ಗದ್ದಲಗಳಿಲ್ಲದೆ ಸಮವಸ್ತ್ರ ನಿಯಮ ಪಾಲಿಸಿಕೊಂಡು ತರಗತಿಗೆ ಹಾಜರಾದರು.
ಶಿವಮೊಗ್ಗದ ಕರ್ನಾಟಕ ಪಬ್ಲಿಕ್ ಶಾಲೆಯ 13, ದಾವಣಗೆರೆಯ ಮಲೆಬೆನ್ನೂರಿನ ಸರ್ಕಾರಿ ಪಿಯು ಕಾಲೇಜಿನ ಪ್ರೌಢ ಶಾಲೆಯ 16 ಹಾಗೂ ಕೊಡಗು ಜಿಲ್ಲೆಯ ಸಿದ್ದಾಪುರ ಹೋಬಳಿಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ 30ಕ್ಕೂ ಹೆಚ್ಚು ಸೇರಿ 59ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಿಜಾಬ್‌ಗೆ ಅವಕಾಶ ನೀಡದ್ದಕ್ಕಾಗಿ ತರಗತಿಗೇ ಗೈರಾದರು. ಇವರಲ್ಲಿ ಬಹುತೇಕರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾಗಿದ್ದು, ಪೂರ್ವ ಸಿದ್ಧತಾ ಪರೀಕ್ಷೆಯಿಂದಲೂ ದೂರವುಳಿದರು. ಹೇಗಿತ್ತು ಶಾಲೆ ಪುನಾರಂಭದ ಮೊದಲ ದಿನ..? ಇಲ್ಲಿದೆ ರಿಪೋರ್ಟ್.