ಸ್ಮಾರ್ಟ್‌ಫೋನ್ ಇಲ್ಲ: ಆನ್‌ಲೈನ್ ಕ್ಲಾಸ್‌ನಿಂದ 40 ಲಕ್ಷ ವಿದ್ಯಾರ್ಥಿಗಳು ವಂಚಿತರು
- 31 ಲಕ್ಷ ವಿದ್ಯಾರ್ಥಿಗಳ ಬಳಿ ಸ್ಮಾರ್ಟ್‌ಫೋನ್ ಇಲ್ಲ
- ರಾಜ್ಯದ 8 ಲಕ್ಷ ಮಕ್ಕಳ ಮನೆಗಳಲ್ಲಿ ದೂರದರ್ಶನ, ರೇಡಿಯೋ ಇಲ್ಲ
- ಸಾರ್ವಜನಿಕ ಶಿಕ್ಷಣ ಇಲಾಖೆ ಜು.1ರಿಂದ ಆನ್‌ಲೈನ್ ತರಗತಿಗಳನ್ನು ಆರಂಭಿಸಿದೆ
ಬೆಂಗಳೂರು (ಜು. 02): ಕೋವಿಡ್ ಸಂಕಷ್ಟದಿಂದ ಶಾಲೆಗಳು ಬಂದ್ ಆಗಿರುವುದರಿಂದ ಆನ್‌ಲೈನ್ ಕ್ಲಾಸ್ ನಡೆಯುತ್ತಿದೆ. ಆನ್‌ಲೈನ್ ತರಗತಿ ಎಲ್ಲರಿಗೂ ಸಿಗುತ್ತಿದೆಯಾ ಎಂದು ನೋಡುವುದಾದರೆ, 31 ಲಕ್ಷ ವಿದ್ಯಾರ್ಥಿಗಳ ಬಳಿ ಯಾವುದೇ ರೀತಿಯ ಸ್ಮಾರ್ಟ್‌ಫೋನ್ ಇಲ್ಲ. 8 ಲಕ್ಷ ವಿದ್ಯಾರ್ಥಿಗಳ ಮನೆಯಲ್ಲಿ ಕನಿಷ್ಠ ಪಕ್ಷ ದೂರದರ್ಶನವಾಗಲಿ, ಇಲ್ಲವೇ ರೇಡಿಯೋ ಆಗಲಿ ಇಲ್ಲ! ಆಶ್ಚರ್ಯವಾದರೂ ಇದು ಸತ್ಯ.
ಶಿಕ್ಷಣ ಸಚಿವರ ಉಸ್ತುವಾರಿ ಜಿಲ್ಲೆಯಲ್ಲಿ ಫೀಸ್ ಟಾರ್ಚರ್ ಆರೋಪ; ಪೋಷಕರ ಪ್ರತಿಭಟನೆ
ಸಾರ್ವಜನಿಕ ಶಿಕ್ಷಣ ಇಲಾಖೆಯೇ 2020-21ನೇ ಸಾಲಿನಲ್ಲಿ ನಡೆಸಿರುವ ಸಮೀಕ್ಷೆಯಲ್ಲಿ ಹೊರಬಿದ್ದಿರುವ ಬಹಿರಂಗ ಸತ್ಯವಿದು. ಇದರಿಂದ 31 ಲಕ್ಷ ವಿದ್ಯಾರ್ಥಿಗಳು ಕಳೆದ ವರ್ಷ ಆನ್‌ಲೈನ್ ತರಗತಿ, ಸರ್ಕಾರ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರ ಮಾಡಿದ ಸಂವೇದಾ ಇ-ಪಾಠ, ರೇಡಿಯೋ ಪಾಠ ಯಾವುದೂ ಇಲ್ಲದೆ ಸಂಪೂರ್ಣ ಶೈಕ್ಷಣಿಕ ಚಟುವಟಿಕೆಗಳಿಂದ ವಂಚಿತರಾಗಿದ್ದಾರೆ.