Hijab Verdict: ನಮಗೆ ಹಿಜಾಬ್ ಬೇಕು, ಹಿಜಾಬ್ ಇಲ್ಲದೇ ಕ್ಲಾಸ್‌ಗೆ ಬರಲ್ಲ: ಶಿವಮೊಗ್ಗ ವಿದ್ಯಾರ್ಥಿನಿಯರು
ನಮಗೆ ಹಿಜಾಬ್ ಬೇಕು, ಕಿತಾಬ್ ಕೂಡಾ ಬೇಕು. ಯೂನಿಫಾರ್ಮ್‌ನಲ್ಲೇ ಹಿಜಾಬ್ ಧರಿಸಿ ಕೂರುತ್ತೇವೆ. ಹಿಜಾಬ್ ಇಲ್ಲದೇ ತರಗತಿಗೆ ಬರುವುದಿಲ್ಲ. ಹೈಕೋರ್ಟ್ ಆದೇಶ ನಮಗೆ ತೃಪ್ತಿ ತಂದಿಲ್ಲ' ಎಂದು ಶಿವಮೊಗ್ಗದಲ್ಲಿ ವಿದ್ಯಾರ್ಥಿನಿಯರು ಹೇಳಿದ್ದಾರೆ.
ಶಿವಮೊಗ್ಗ (ಮಾ. 16): ನಮಗೆ ಹಿಜಾಬ್ ಬೇಕು, ಕಿತಾಬ್ ಕೂಡಾ ಬೇಕು. ಯೂನಿಫಾರ್ಮ್‌ನಲ್ಲೇ ಹಿಜಾಬ್ ಧರಿಸಿ ಕೂರುತ್ತೇವೆ. ಹಿಜಾಬ್ ಇಲ್ಲದೇ ತರಗತಿಗೆ ಬರುವುದಿಲ್ಲ. ಹೈಕೋರ್ಟ್ ಆದೇಶ ನಮಗೆ ತೃಪ್ತಿ ತಂದಿಲ್ಲ' ಎಂದು ಶಿವಮೊಗ್ಗದಲ್ಲಿ ವಿದ್ಯಾರ್ಥಿನಿಯರು ಹೇಳಿದ್ದಾರೆ.
Hijab Verdict: ತುರ್ತು ಪ್ರಕರಣ ಎಂದು ಪರಿಗಣಿಸಲು ಸುಪ್ರೀಂಕೋರ್ಟ್ ನಕಾರ
ದೇಶಾದ್ಯಂತ ತೀವ್ರ ಚರ್ಚೆ ಹುಟ್ಟುಹಾಕಿದ್ದ ಹಿಜಾಬ್ ಪ್ರಕರಣ ಕುರಿತ ಹೈಕೋರ್ಟ್ ಆದೇಶ ಹೊರಬಿದ್ದಿದ್ದು, ಶಾಲಾ ಕಾಲೇಜಿನ ತರಗತಿಗಳಿಗೆ ಹಿಜಾಬ್ ಧರಿಸಿ ಹಾಜರಾಗುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ 2022 ಫೆ.5ರಂದು ಹೊರಡಿಸಿದ್ದ ಆದೇಶವನ್ನು ಉಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ.