Hijab Verdict: ತುರ್ತು ಪ್ರಕರಣ ಎಂದು ಪರಿಗಣಿಸಲು ಸುಪ್ರೀಂಕೋರ್ಟ್ ನಕಾರ
ಉಡುಪಿ ವಿದ್ಯಾರ್ಥಿನಿಯರ ಪರವಾಗಿ, ವಕೀಲ ಸಂಜಯ್ ಹೆಗ್ಡೆ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಪ್ರಸ್ತಾಪಿಸಿ, ತುರ್ತು ಪ್ರಕರಣ ಎಂದು ಪರಿಗಣಿಸುವಂತೆ ಮನವಿ ಮಾಡಿದ್ದಾರೆ. ಆದರೆ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿದೆ. ಹೋಳಿ ಹಬ್ಬದ ನಂತರ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಉಡುಪಿ (ಮಾ. 16): ಉಡುಪಿ ವಿದ್ಯಾರ್ಥಿನಿಯರ ಪರವಾಗಿ, ವಕೀಲ ಸಂಜಯ್ ಹೆಗ್ಡೆ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಪ್ರಸ್ತಾಪಿಸಿ, ತುರ್ತು ಪ್ರಕರಣ ಎಂದು ಪರಿಗಣಿಸುವಂತೆ ಮನವಿ ಮಾಡಿದ್ದಾರೆ. ಆದರೆ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿದೆ. ಹೋಳಿ ಹಬ್ಬದ ನಂತರ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
Hijab Verdict:ಸುಪ್ರೀಂ ಅಂಗಳಕ್ಕೆ ಹಿಜಾಬ್, ಹೋರಾಟ ಮುಂದುವರೆಸುತ್ತೇವೆ: ಹಿಜಾಬ್ ಪರ ವಕೀಲರು
ದೇಶಾದ್ಯಂತ ತೀವ್ರ ಚರ್ಚೆ ಹುಟ್ಟುಹಾಕಿದ್ದ ಹಿಜಾಬ್ ಪ್ರಕರಣ ಕುರಿತ ಹೈಕೋರ್ಟ್ ಆದೇಶ ಮಂಗಳವಾರ ಹೊರಬಿದ್ದಿದ್ದು, ಶಾಲಾ ಕಾಲೇಜಿನ ತರಗತಿಗಳಿಗೆ ಹಿಜಾಬ್ ಧರಿಸಿ ಹಾಜರಾಗುವುದನ್ನು ನಿಷೇಧಿಸಿ ರಾಜ್ಯ ಸರ್ಕಾರ 2022 ಫೆ.5ರಂದು ಹೊರಡಿಸಿದ್ದ ಆದೇಶವನ್ನು ಉಚ್ಚ ನ್ಯಾಯಾಲಯ ಎತ್ತಿ ಹಿಡಿದಿದೆ.