ಪಠ್ಯಪುಸ್ತಕ ಬಗ್ಗೆ ಶಿಕ್ಷಣ ತಜ್ಞರು ನಿರ್ಧರಿಸುತ್ತಾರೆ: ಬಿ ಸಿ ನಾಗೇಶ್

ಸಚಿವ ಬಿಸಿ ನಾಗೇಶ್   ‌ಮಕ್ಕಳಲ್ಲಿ ನೀತಿಪಾಠ ಹೆಚ್ಚಿಸುವ ಸಲುವಾಗಿ ಪಠ್ಯಕ್ರಮ ಅಳವಡಿಸುವ ಬಗ್ಗೆ ಪ್ರಸ್ತಾಪ ಇದೆ. ಅದರಲ್ಲಿ ಏನಿರಬೇಕು ಅನ್ನೋದನ್ನು ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

First Published Mar 18, 2022, 4:25 PM IST | Last Updated Mar 18, 2022, 4:25 PM IST

ಬೆಂಗಳೂರು(ಮಾ.18): ರಾಜ್ಯದ ಪ್ರಾಥಮಿಕ ಶಾಲಾ ಹಂತದ ಪಠ್ಯ ಪುಸ್ತಕದಲ್ಲಿ (Text Book) ಭಗವದ್ಗೀತೆ (Bhagavad Gita) ಸೇರಿಸುವ ಕುರಿತ ಚರ್ಚೆ ಬಗ್ಗೆ ವಿಧಾನ ಸೌಧದಲ್ಲಿ ‌ಮಾತನಾಡಿದ   ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿಸಿ ನಾಗೇಶ್ ( Education Minister BC Nagesh) ‌ಮಕ್ಕಳಲ್ಲಿ ನೀತಿಪಾಠ ಹೆಚ್ಚಿಸುವ ಸಲುವಾಗಿ ಪಠ್ಯಕ್ರಮ ಅಳವಡಿಸುವ ಬಗ್ಗೆ ಪ್ರಸ್ತಾಪ ಇದೆ. ಅದರಲ್ಲಿ ಏನಿರಬೇಕು ಅನ್ನೋದನ್ನು ಸಿಎಂ ಜೊತೆ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ.

ತುಮಕೂರು : ಎಣ್ಣೆ ಹೊಡೆದು ಶಾಲೆಗೆ ಬಂದ ಶಿಕ್ಷಕ ಅಮಾನತು

ಭಗವದ್ಗೀತೆ ಬಗ್ಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು  ಒಲವು ವ್ಯಕ್ತಪಡಿಸಿದ್ದರು. ಅಲ್ಲದೆ ಬೈಬಲ್ (bible), ಕುರಾನ್(quran), ಎಲ್ಲದರಲ್ಲೂ ನೀತಿ ಪಾಠಗಳಿರಬಹುದು. ಆದ್ರೆ ಅದು ಯಾವುದು ಏನು ಅನ್ನೋದನ್ನು ಶಿಕ್ಷಣ ತಜ್ಞರು ನಿರ್ಧಾರ ಮಾಡ್ತಾರೆ. ಅದನ್ನು ರಾಜಕಾರಣಿಗಳು ನಿರ್ಧಾರ ಮಾಡೋದಲ್ಲ ಎಂದಿದ್ದಾರೆ. ಆಲ್ಲದೆ ಮಕ್ಕಳಿಗೆ ಸಂಸ್ಕಾರ ಕೊಡುವಂತಹದ್ದು, ಶಿಕ್ಷಣದ ಭಾಗ ಅಂತ ನಮಗೆ ಅನಿಸಿದೆ. ಅದರ ಬಗ್ಗೆ ‌ಮುಂದಿನ ದಿನಗಳಲ್ಲಿ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.

Video Top Stories