ಅಧಿವೇಶನ ಬಳಿಕ 1-5ನೇ ಕ್ಲಾಸ್ ಆರಂಭ ಬಗ್ಗೆ ನಿರ್ಧಾರ: ಶಿಕ್ಷಣ ಸಚಿವ
ಅಧಿವೇಶನ ಮುಗಿದ ಬಳಿಕ ಮುಖ್ಯಮಂತ್ರಿ ನೇತೃತ್ವದಲ್ಲಿ ತಾಂತ್ರಿಕ ತಜ್ಞರ ಸಭೆ ನಡೆಯಲಿದ್ದು, ಅವರ ಸಲಹೆ ಮೇರೆಗೆ 1ರಿಂದ 5ನೇ ತರಗತಿ ಆರಂಭದ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಹೇಳಿದ್ದಾರೆ.
ಬೆಂಗಳೂರು (ಸೆ. 20): ಅಧಿವೇಶನ ಮುಗಿದ ಬಳಿಕ ಮುಖ್ಯಮಂತ್ರಿ ನೇತೃತ್ವದಲ್ಲಿ ತಾಂತ್ರಿಕ ತಜ್ಞರ ಸಭೆ ನಡೆಯಲಿದ್ದು, ಅವರ ಸಲಹೆ ಮೇರೆಗೆ 1ರಿಂದ 5ನೇ ತರಗತಿ ಆರಂಭದ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ ಹೇಳಿದ್ದಾರೆ.
ಶಾಲೆ ನವೀಕರಣಕ್ಕೆ 40 ಲಕ್ಷ ರೂ ಸಂಗ್ರಹಿಸಿದ ಶಿಕ್ಷಕರು, ಗ್ರಾಮಸ್ಥರು!
ಶಾಲೆ ಆರಂಭದ ಬಗ್ಗೆ ಅಧಿವೇಶನದ ಬಳಿಕ ಸ್ಪಷ್ಟಚಿತ್ರಣ ಗೊತ್ತಾಗಲಿದೆ. ತಾಂತ್ರಿಕ ತಜ್ಞರ ಸಲಹೆ ಮೇರೆಗೆ ಪೂರ್ಣ ಪ್ರಮಾಣದಲ್ಲಿ ಶಾಲೆಗಳ ಆರಂಭದ ಬಗ್ಗೆ ಮುಖ್ಯಮಂತ್ರಿ ನಿರ್ಧಾರ ಕೈಗೊಳ್ಳಲಿದ್ದಾರೆ. ಶಾಲೆ ಪ್ರಾರಂಭಿಸಲು ಶಿಕ್ಷಣ ಇಲಾಖೆ, ಶಿಕ್ಷಕರು ಸಿದ್ಧರಾಗಿದ್ದೇವೆ. ಆದರೆ, ಪುಟ್ಟಮಕ್ಕಳು ಕೋವಿಡ್ ಮಾರ್ಗಸೂಚಿ ಪಾಲನೆ ಮಾಡುವ ಬಗ್ಗೆ ಅನುಮಾನವಿದೆ ಎಂದಿದ್ದಾರೆ.