Karnataka Legislature Joint Session: ಪೊಲೀಸ್ ಬ್ಯಾಂಡ್ ಪ್ರಾಕ್ಟೀಸ್‌ಗೆ ಮಕ್ಕಳ ಸಾಥ್!
ಸೋಮವಾರದಿಂದ ವಿಧಾನಮಂಡಲ ಜಂಟಿ ಅಧಿವೇಶನ ಆರಂಭವಾಗುವ ಹಿನ್ನೆಲೆ ಪೊಲೀಸ್ ಬ್ಯಾಂಡ್ ನಿಂದ ಪ್ರ್ಯಾಕ್ಟೀಸ್ ನಡೆಯುತ್ತಿದ್ದಾಗ, ಸಿಬ್ಬಂದಿಗಳ ಮಕ್ಕಳು ಸಲ್ಯೂಟ್ ಮಾಡಿ ಗೌರವ ಸಲ್ಲಿಸಿರುವ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು(ಫೆ.12): ಸೋಮವಾರದಿಂದ ವಿಧಾನಮಂಡಲ ಜಂಟಿ ಅಧಿವೇಶನ (Karnataka Legislature Joint Session) ಆರಂಭವಾಗುವ ಹಿನ್ನೆಲೆ ವಿಧಾನಸೌಧದಲ್ಲಿ ಸಿಬ್ಬಂದಿಗಳು, ಪೊಲೀಸರು ಭರದ ಸಿದ್ಧತಾ ಕಾರ್ಯದಲ್ಲಿ ತೊಡಗಿದ್ದಾರೆ. ಸಿಬ್ಬಂದಿಗಳು ವಿಧಾನಸೌಧದ ಮೊಗಸಾಲೆ ಸ್ವಚ್ಛಗೊಳಿಸುತ್ತಿರುವುದ ಒಂದೆಡೆಯಾದರೆ, ರಾಜ್ಯಪಾಲರ ಸ್ವಾಗತಕ್ಕೆ ಪೊಲೀಸ್ ಬ್ಯಾಂಡ್ ನಿಂದ ಪ್ರ್ಯಾಕ್ಟೀಸ್ ನಡೆಯುತ್ತಿದೆ. ಸೋಮವಾರದಿಂದ 10 ದಿನಗಳ ಕಾಲ ಜಂಟಿ ಅಧಿವೇಶನ ನಡೆಯಲಿದ್ದು, ಪೊಲೀಸ್ ಬ್ಯಾಂಡ್ ಪ್ರಾಕ್ಟೀಸ್ ವೇಳೆ ಸಿಬ್ಬಂದಿ ಮಕ್ಕಳು ಸಲ್ಯೂಟ್ ಮಾಡಿ ಗಮನ ಸೆಳೆದಿದ್ದಾರೆ, ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
Global remarks on hijab row: ನಮ್ಮ ಆಂತರಿಕ ವಿಚಾರದಲ್ಲಿ ಮೂಗು ತೂರಿಸಬೇಡಿ,
ಕರ್ನಾಟಕದ 19ನೇ ರಾಜ್ಯಪಾಲದರಾದ ಥಾವರ್ ಚಂದ್ ಗೆಹ್ಲೋಟ್ (Thaawar Chand Gehlot) ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರುಗಳು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡುವಂತೆ ಆಹ್ವಾನಿಸಿದರು. 15ನೇ ಅಸೆಂಬ್ಲಿ ಚಾಲ್ತಿಯಲ್ಲಿದ್ದು, 12ನೇ ಅಧಿವೇಶನ ಇದಾಗಿದೆ. ಸೋಮವಾರದಿಂದ ಫೆಬ್ರವರಿ 25ರವರೆಗೆ ಅಧಿವೇಶನ ನಡೆಯಲಿದ್ದು, 12ನೇ ಅಧಿವೇಶನ ಮುಗಿದ ಬಳಿಕ ಬಜೆಟ್ ಅಧಿವೇಶನ ಮಾರ್ಚ್ ಮೊದಲ ವಾರದಲ್ಲಿ ನಡೆಯಲಿದೆ.