ಪಠ್ಯಪುಸ್ತಕ ಕಮಿಟಿಯಲ್ಲಿ ಎಲ್ಲರೂ ಮನುವಾದಿಗಳು; Priyanka Kharge
ಶಾಸಕ ಪ್ರಿಯಾಂಕ್ ಖರ್ಗೆ ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ನಿಮಗಿಂತ ಚಕ್ರತೀರ್ಥ ದೊಡ್ಡವರಾದ್ರಾ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಪ್ರಶ್ನಿಸಿದ್ದಾರೆ.
ಬೆಂಗಳೂರು (ಜೂ.4): ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಪಠ್ಯಪುಸ್ತಕ ಪರಿಷ್ಕರಣೆ (textbook revision) ವಿಚಾರದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಎಲ್ಲದಕ್ಕೂ ಮೂಗ ಬಸವನ ರೀತಿ ಇರ್ತೀರಿ. ನಿಮಗಿಂತ ಚಕ್ರತೀರ್ಥ ದೊಡ್ಡವರಾದ್ರಾ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (basavaraj bommai) ಅವರನ್ನು ಪ್ರಶ್ನಿಸಿದ್ದಾರೆ. ಬಸವ, ಬುದ್ಧ, ಅಂಬೇಡ್ಕರ್ಗೆ ಅವರು ಅವಮಾನ ಮಾಡಿದ್ದಾನೆ. ನಾರಾಯಣಗುರು, ನಾಡಗೀತೆಗೆ ಅವಮಾನ ಮಾಡಿದ್ದಾನೆ. ಯಾಕೆ ನೀವು ಅವನ ಮೇಲೆ ಕ್ರಮ ಜರುಗಿಸಲಿಲ್ಲ. ನಮ್ಮ ರಾಜ್ಯದ ಮುಖ್ಯಮಂತ್ರಿ ಯಾರು ಎಂದು ಗಂಭೀರವಾಗಿ ಎಂದು ಪ್ರಶ್ನಿಸಿದರು.
ಸಿಎಂ ಯಾರು, ನಿಮಗಿಂತಲೂ ಚಕ್ರತೀರ್ಥ ದೊಡ್ಡೋರಾ? ಬೊಮ್ಮಾಯಿ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ
ಪಿಎಸ್ಐ ಹಗರಣ ನಡೆದಾಗ ಸುಮ್ಮನಿದ್ದಿರಿ. ಉಪನ್ಯಾಸಕರ ನೇಮಕಾತಿ ಹರಗಣ ನಡೆದರೂ ಸುಮ್ಮನಿದ್ದಿರಿ. ಶ್ರೀರಾಮಸೇನೆ ನಿಮ್ಮ ಗಂಡಸ್ತನದ ಬಗ್ಗೆ ಪ್ರಶ್ನೆ ಮಾಡುತ್ತೆ. ನಿಮಗೆ ಡೇಟ್ ಮೇಲೆ ಡೇಟ್ ಕೊಡ್ತಾರೆ. ಯಾಕೆ ಯಾರ ಮೇಲೂ ಕ್ರಮ ತೆಗೆದುಕೊಳ್ಳುತ್ತಿಲ್ಲ. ನಿಮ್ಮ ಪ್ರಕಾರ ರೋಹಿತ್ ಚಕ್ರತೀರ್ಥ ಪ್ರಶ್ನಾತೀತರೇ? ನಿಮಗೆ ರೋಹಿತ್ ಬೇಕು. ವಿದ್ಯಾರ್ಥಿಗಳು ಮುಖ್ಯರಲ್ಲ ಎಂದು ಕಿಡಿಕಾರಿದರು.