ಕರ್ಫ್ಯೂ ಸಮಯದಲ್ಲಿ ಮಕ್ಕಳನ್ನು ಆಕ್ಟಿವ್ ಆಗಿಡಲು ಪೊಲೀಸ್ ಇನ್ಸ್‌ಪೆಕ್ಟರ್ ಮಾಡಿದ ವಿಶಿಷ್ಟ ಕೆಲಸವಿದು!
ಚಾಮರಾಜನಗರ ಪೂರ್ವಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಆನಂದ್ ಶಿಕ್ಷಣ ಸೇವೆ ಅಭಿನಂದನಾರ್ಹ. ತಮ್ಮ ಪೊಲೀಸ್ ಠಾಣೆ ವ್ಯಾಪ್ತಿಯ 500 ಕ್ಕು ಹೆಚ್ಚು ಮಕ್ಕಳಿಗೆ ಡ್ರಾಯಿಂಗ್ ಪುಸ್ತಕ, ಮಗ್ಗಿ ಪುಸ್ತಕ, ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್ ಕಲರ್ ಪೆನ್ಸಿಲ್ ವಿತರಣೆ ಮಾಡಿದ್ದಾರೆ.
ಮೈಸೂರು (ಮೇ. 01): ಚಾಮರಾಜನಗರ ಪೂರ್ವಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಆನಂದ್ ಶಿಕ್ಷಣ ಸೇವೆ ಅಭಿನಂದನಾರ್ಹ. ತಮ್ಮ ಪೊಲೀಸ್ ಠಾಣೆ ವ್ಯಾಪ್ತಿಯ 500 ಕ್ಕು ಹೆಚ್ಚು ಮಕ್ಕಳಿಗೆ ಡ್ರಾಯಿಂಗ್ ಪುಸ್ತಕ, ಮಗ್ಗಿ ಪುಸ್ತಕ, ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್ ಕಲರ್ ಪೆನ್ಸಿಲ್ ವಿತರಣೆ ಮಾಡಿದ್ದಾರೆ.
ಕೋವಿಡ್‌ನಿಂದ ಪೋಷಕರ ಕಳೆದುಕೊಂಡ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸೋನು ಸೂದ್ ಮನವಿ
ಬೀಟ್ ಪೊಲೀಸರ ಮೂಲಕ ಪುಸ್ತಕ ವಿತರಣಾ ಕಾರ್ಯಕ್ರಮ ಜೊತೆಗೆ ಕೋವಿಡ್ ಜಾಗೃತಿಯನ್ನೂ ಮೂಡಿಸಲಾಗುತ್ತಿದೆ. ಪೂರ್ವಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 45 ಕ್ಕೂ ಹೆಚ್ಚು ಬೀಟ್ ಗಳಿದ್ದು ಪ್ರತಿ ಬೀಟ್ ನಲ್ಲಿಯೂ ತಲಾ 15ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ಪರಿಕರಿಗಳ ವಿತರಣೆ ಮಾಡಲಾಗಿದೆ.