Big 3 Impact: ಶಿಕ್ಷಣ ನೀಡಬೇಕಾದ ಶಿಕ್ಷಕರಿಂದಲೇ ಮಕ್ಕಳ ಮೇಲೆ ದೌರ್ಜನ್ಯ!
ಖಾಸಗಿ ಶಾಲೆಯಲ್ಲಿ ಮಕ್ಕಳಿಗೆ ಮಾನಸಿಕವಾಗಿ ಚಿತ್ರ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಪೋಷಕರು ಬುಧವಾರ ಲಗ್ಗೆರೆಯ ನಾರಾಯಣ ಇ-ಟೆಕ್ನೊ ಶಾಲೆ ವಿರುದ್ಧ ಪೋಷಕರು ಪ್ರತಿಭಟನೆ ನಡೆಸಿದ್ದರು.
ಬೆಂಗಳೂರು (ಮೇ.12): ಖಾಸಗಿ ಶಾಲೆಯಲ್ಲಿ (Private School) ಮಕ್ಕಳಿಗೆ ಮಾನಸಿಕವಾಗಿ ಚಿತ್ರ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಪೋಷಕರು (Parents) ಬುಧವಾರ ಲಗ್ಗೆರೆಯ ನಾರಾಯಣ ಇ-ಟೆಕ್ನೊ ಶಾಲೆ ವಿರುದ್ಧ ಪೋಷಕರು ಪ್ರತಿಭಟನೆ (Protest) ನಡೆಸಿದ್ದರು. ಮಾತ್ರವಲ್ಲದೇ ಪ್ರತಿಭಟಿಸಿದ್ದ ಪೋಷಕರ ಮಕ್ಕಳನ್ನ ಶಾಲೆ ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪಿಸಿರುವ ಪೋಷಕರು, ಬೇರೆ ಮಕ್ಕಳಿಗೆ ಇವರ ಜೊತೆ ಸೇರದಂತೆ ಸೂಚನೆ ನೀಡುತ್ತಾರೆ. ಮಕ್ಕಳಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ.
1.31 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಆಸ್ಪತ್ರೆಗೆ ಸಿಬ್ಬಂದಿಯೇ ಇಲ್ಲ..ಒಬ್ರು ಡಾಕ್ಟ್ರು, ನರ್ಸ್ ಇಲ್ಲ
ಇಡೀ ದಿನ ಶಾಲೆಯಲ್ಲಿ ನಿಲ್ಲಿಸಿ ಮಕ್ಕಳಿಗೆ ಶಿಕ್ಷೆ ನೀಡುತ್ತಾರೆ, ಬೈಯ್ಯುತ್ತಾರೆ ಎಂದು ಅಳಲು ತೋಡಿಕೊಂಡಿದ್ದರು. ಈ ವಿಚಾರವಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಬುಧವಾರ ವರದಿ ಮಾಡಿತ್ತು. ಈ ವರದಿಯನ್ನು ನೋಡಿ ಶಾಲೆಗಳು ಇದೀಗ ಅಲರ್ಟ್ ಆಗಿದೆ. ಮಕ್ಕಳು, ಪೋಷಕರಿಗೆ ಟಾರ್ಚರ್ ಕೊಟ್ರೆ ಸುಮ್ಮನಿರಲ್ಲ. ಯಾವ ಸಮಸ್ಯೆಯೇ ಇರಲಿ, ಅವರು ಯಾರೇ ಆಗಿರಲಿ ಸಮಸ್ಯೆಗೆ ಪರಿಹಾರ ಕೊಡದೇ ಸುಮ್ಮನಾಗಲ್ಲ ಬಿಗ್ 3. ಇನ್ನು ಬಿಗ್ 3 ಕಾಳಜಿಗೆ ಪೋಷಕರು, ವಿದ್ಯಾರ್ಥಿಗಳು ಸರ್ಕಾರದ ಕೆಲಸ ನಿಮ್ಮಿಂದ ಆಗಿದೆ ಎಂದು ಧನ್ಯವಾದವನ್ನು ತಿಳಿಸಿದ್ದಾರೆ.