ಬೈಬಲ್ ಬೋಧನೆ ಆರೋಪ: ಕ್ಲಾರೆನ್ಸ್ ಶಾಲೆಗೆ ಬಿಇಓ ಭೇಟಿ, ವರದಿ ಸಲ್ಲಿಸಲು ಸೂಚನೆ
ಕ್ಲಾರೆನ್ಸ್ ಶಾಲೆಯಲ್ಲಿ ಬೈಬಲ್ ಕಡ್ಡಾಯ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಬೆಂಗಳೂರು ಉತ್ತರ ಸಿಇಒ ಕ್ಲಾರೆನ್ಸ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಲೆಯಲ್ಲಿ ಎಷ್ಟು ವರ್ಷದಿಂದ ಬೈಬಲ್ ಬೋಧನೆ ಮಾಡುತ್ತಿದ್ದೀರಿ..? ಎಷ್ಟು ವಿದ್ಯಾರ್ಥಿಗಳಿದ್ದಾರೆ.? ಎಂದು ಪ್ರಾಂಶುಪಾಲರಿಂದ ಮಾಹಿತಿ ಪಡೆದರು.
ಬೆಂಗಳೂರು (ಏ. 25): ಕ್ಲಾರೆನ್ಸ್ ಶಾಲೆಯಲ್ಲಿ ಬೈಬಲ್ ಕಡ್ಡಾಯ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಬೆಂಗಳೂರು ಉತ್ತರ BEO ಕ್ಲಾರೆನ್ಸ್ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಾಲೆಯಲ್ಲಿ ಎಷ್ಟು ವರ್ಷದಿಂದ ಬೈಬಲ್ ಬೋಧನೆ ಮಾಡುತ್ತಿದ್ದೀರಿ..? ಎಷ್ಟು ವಿದ್ಯಾರ್ಥಿಗಳಿದ್ದಾರೆ.? ಎಂದು ಪ್ರಾಂಶುಪಾಲರಿಂದ ಮಾಹಿತಿ ಪಡೆದರು.
ಹಿಜಾಬ್ ವಿವಾದದ ಬೆನ್ನಲ್ಲೇ ಕರ್ನಾಟಕದಲ್ಲಿ ಭುಗಿಲೆದ್ದ ಬೈಬಲ್ ವಿವಾದ!
ಮಕ್ಕಳಿಗೆ ಬೈಬಲ್ ತರಲು ನಿರಾಕರಿಸುವುದಿಲ್ಲ ಎಂದು ಮಕ್ಕಳ ಪೋಷಕರಿಗೆ ಶಾಲಾ ಆಡಳಿತ ಮಂಡಳಿ ತಿಳಿಸಿದೆ. ಶಾಲಾ ಆಡಳಿತ ಮಂಡಳಿಯ ಈ ಕ್ರಮದ ನಂತರ ಕೆಲವು ಬಲಪಂಥೀಯ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಇದು ಕರ್ನಾಟಕ ಶಿಕ್ಷಣ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.
ಶಾಲೆಯು ಕ್ರೈಸ್ತೇತರ ವಿದ್ಯಾರ್ಥಿಗಳನ್ನು ಬೈಬಲ್ ಓದುವಂತೆ ಒತ್ತಾಯಿಸುತ್ತಿದೆ. ಕ್ರಿಶ್ಚಿಯನ್ ಅಲ್ಲದ ವಿದ್ಯಾರ್ಥಿಗಳು ಸಹ ಶಾಲೆಯಲ್ಲಿ ಓದುತ್ತಿದ್ದಾರೆ ಮತ್ತು ಬೈಬಲ್ ಓದುವಂತೆ ಒತ್ತಾಯಿಸುತ್ತಿದ್ದಾರೆ. ಈ ಕುರಿತು ಶಿಕ್ಷಣ ಇಲಾಖೆ ಶಾಲೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿಂದೂ ಜನಜಾಗೃತಿ ಸಮಿತಿ ಒತ್ತಾಯಿಸಿತ್ತು.