ಹಠಕ್ಕೆ ಬಿದ್ದ ಖಾಸಗಿ ಶಾಲೆಗಳು, ಪೋಷಕರಿಂದ ಶುಲ್ಕ ವಸೂಲಿಗೆ ಹೊಸ ಪ್ಲ್ಯಾನ್
ಶೈಕ್ಷಣಿಕ ವರ್ಷ ಪ್ರಾರಂಭಕ್ಕೂ ಮುನ್ನ ಖಾಸಗಿ ಶಾಲೆಗಳು ಪೋಷಕರಿಂದ ಶುಲ್ಕ ವಸೂಲಿಗೆ ಹಠಕ್ಕೆ ಬಿದ್ದಿವೆ.
ಬೆಂಗಳೂರು (ಜೂ. 11): ಶೈಕ್ಷಣಿಕ ವರ್ಷ ಪ್ರಾರಂಭಕ್ಕೂ ಮುನ್ನ ಖಾಸಗಿ ಶಾಲೆಗಳು ಪೋಷಕರಿಂದ ಶುಲ್ಕ ವಸೂಲಿಗೆ ಹಠಕ್ಕೆ ಬಿದ್ದಿವೆ. ಶುಲ್ಕ ವಸೂಲಿಗೆ ನಾನಾ ಕಸರತ್ತು ನಡೆಸುತ್ತಿದ್ದಾರೆ. ಖಾಸಗಿ ಸಂಸ್ಥೆಗಳಿಂದ ಸಾಲ ಪಡೆಯಿರಿ, ಶಾಲೆಯ ಶುಲ್ಕ ಕಟ್ಟಿ ಎನ್ನುತ್ತಿದ್ದಾರೆ. ಶಾಲಾ ಆಡಳಿತ ಮಂಡಳಿಯಿಂದಲೇ ಶುಲ್ಕ ಕಟ್ಟಲು ವ್ಯವಸ್ಥೆ ಮಾಡಲಾಗಿದೆ. ಶಾಲಾ ಅಂಗಳಕ್ಕೆ ಫೈನಾನ್ಸ್ ಕಂಪನಿಗಳು ಕಾಲಿಟ್ಟಿವೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.