ಹಿಂದೂ ಸಂಘಟನೆಗಳಿಂದ ಕ್ರೈಸ್ತ ಶಾಲೆ ವಿರುದ್ಧ ಬೈಬಲ್‌ ಹೇರಿಕೆ ಆರೋಪ

ಬೆಂಗಳೂರಿನ ಕ್ಲಾರೆನ್ಸ್ ಪ್ರೌಢಶಾಲೆ ಮಕ್ಕಳಿಗೆ ಬೈಬಲ್ ತರಲು ನಿರಾಕರಿಸುವುದಿಲ್ಲ ಎಂದು ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.

First Published Apr 25, 2022, 12:00 PM IST | Last Updated Apr 25, 2022, 12:00 PM IST

ಬೆಂಗಳೂರು(ಏ.25): ಬೆಂಗಳೂರಿನ ಕ್ಲಾರೆನ್ಸ್ ಪ್ರೌಢಶಾಲೆ (Clarence High School ) ಮಕ್ಕಳಿಗೆ ಬೈಬಲ್ (Bible) ತರಲು ನಿರಾಕರಿಸುವುದಿಲ್ಲ ಎಂದು ಮಕ್ಕಳ ಪೋಷಕರಿಗೆ ಶಾಲಾ ಆಡಳಿತ ಮಂಡಳಿ  ತಿಳಿಸಿದೆ. ಶಾಲಾ ಆಡಳಿತ ಮಂಡಳಿಯ ಈ ಕ್ರಮದ ನಂತರ ಕೆಲವು ಬಲಪಂಥೀಯ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಇದು ಕರ್ನಾಟಕ ಶಿಕ್ಷಣ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದಿವೆ. ಹಿಂದೂ ಜನಜಾಗೃತಿ ಸಮಿತಿಯ (Hindu Janajagruti Samithi) ರಾಜ್ಯ ವಕ್ತಾರ ಮೋಹನ್ ಗೌಡ ಮಾತನಾಡಿ (Mohan Gowda ), ಶಾಲೆಯು ಕ್ರೈಸ್ತೇತರ ವಿದ್ಯಾರ್ಥಿಗಳನ್ನು ಬೈಬಲ್ ಓದುವಂತೆ ಒತ್ತಾಯಿಸುತ್ತಿದೆ.

ಹಿಜಾಬ್ ವಿವಾದದ ಬೆನ್ನಲ್ಲೇ ಕರ್ನಾಟಕದಲ್ಲಿ ಭುಗಿಲೆದ್ದ ಬೈಬಲ್ ವಿವಾದ!

ಕ್ರಿಶ್ಚಿಯನ್ ಅಲ್ಲದ ವಿದ್ಯಾರ್ಥಿಗಳು ಸಹ ಶಾಲೆಯಲ್ಲಿ ಓದುತ್ತಿದ್ದಾರೆ ಮತ್ತು ಬೈಬಲ್ ಓದುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಸಮಿತಿಯು ಹೇಳಿಕೊಂಡಿದೆ. ಮಾಹಿತಿಯ ಪ್ರಕಾರ, ಶಾಲೆಗೆ ಪ್ರವೇಶಕ್ಕಾಗಿ ಅರ್ಜಿ ನಮೂನೆಯಲ್ಲಿ ಕ್ರಮಸಂಖ್ಯೆ 11 ಹೀಗಿದೆ, 'ಪಾಲಕರು ತನ್ನ ಮಗು ತನ್ನ ನೈತಿಕ ಮತ್ತು ಆಧ್ಯಾತ್ಮಿಕ ಕಲ್ಯಾಣಕ್ಕಾಗಿ ಬೆಳಿಗ್ಗೆ ಅಸೆಂಬ್ಲಿ, ಸ್ಕ್ರಿಪ್ಚರ್ ಕ್ಲಾಸ್ ಸೇರಿದಂತೆ ಇತರ ತರಗತಿಗಳಲ್ಲಿ ಭಾಗವಹಿಸುತ್ತಾನೆ ಎಂದು ಖಚಿತಪಡಿಸುತ್ತಾನೆ. ಶಾಲೆಗೆ ಬರುವಾಗ ಬೈಬಲ್ ಬೋಧನೆಯನ್ನು ಯಾರೂ ವಿರೋಧಿಸುವುದಿಲ್ಲ ಎಂದಿದೆ.

Video Top Stories